ಮೂಡುಬಿದಿರೆ: ಇಲ್ಲಿನ ಪುತ್ತಿಗೆ ಪದವು ನಿವಾಸಿ ರಾಮ ಮತ್ತು ವಿಮಲಾ ದಂಪತಿಯ ಪುತ್ರಿ ಭವಾನಿ(27) ಕಳೆದ ಸೋಮವಾರದಿಂದ ಕಾಣೆಯಾಗಿರುವುದಾಗಿ ಮೂಡುಬಿದಿರೆ ಠಾಣೆಗೆ ದೂರು ನೀಡಲಾಗಿದೆ. ಅವಿವಾಹಿತೆಯಾಗಿದ್ದು ಮನೆಯಲ್ಲೇ ಬೀಡಿ ಕಟ್ಟುತ್ತಿದ್ದ ಭವಾನಿ ಸೊಮವಾರ ಕೊಡ್ಯಡ್ಕ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಮರಳಿ ಬಾರದೇ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ.

