ಬಂಟ್ವಾಳ : ನರಿಕೊಂಬು ಗ್ರಾಮದ ನಾರಿಕೊಂಬೇಶ್ವರ ದೇವಸ್ಥಾನದ ರಸ್ತೆ ಕಾಮಗಾರಿ ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನಾರಿಕೊಂಬೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು . ಇದೇ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ನರಿಕೊಂಬು ವಾಸುದೇವ ಕಾರಂತರು ಸಚಿವರನ್ನು ಶಾಲು ಹೊದಿಸಿ ಫಲಪುಷ್ಪ ಸರಣಿಕೆ ನೀಡಿ ಗೌರವಿಸಿದರು . ಜಿ.ಪಂ.ಸದಸ್ಯರಾದ ಮಮತಾ ಗಟ್ಟಿ , ಚಂದ್ರಪ್ರಕಾಶ್ ಶೆಟ್ಟಿ , ಕೆ.ಡಿ.ಪಿ.ಸದಸ್ಯ ಉಮೇಶ್ ಬೋಳಂತೂರು , ಪಂ.ಅಧ್ಯಕ್ಷೆ ಸುಮತಿ ಸದಾನಂದ , ಆನಂದ ಸಾಲಿಯಾನ್ ಉಪಸ್ಥಿತರಿದ್ದರು .
KAR_4932

By Suddi9

Leave a Reply

Your email address will not be published. Required fields are marked *