ಸುದ್ದಿ9ಬಂಟ್ವಾಳ: ಅಧಿಕಾರಿಗಳು ಇಲಾಖೆಯ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿದಾಗ ಸರಕಾರದ ಯೋಜನೆಗಳು ಸಮರ್ಪಕವಾಗಿ ಸದ್ಬಳಕೆಯಾಗುತ್ತವೆ, ಅಲ್ಲದೆ ಅಧಿಖಾರಿಗಳೊಂದಿಗೆ ನಾಗರಿಕರು ಕೈಜೋಡಿಸಿದಾಗ ಅಭಿವೃದ್ದಿಯಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದು ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು, ಅವರು ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಭಾಗವಹಿಸಿದಾಗ ಮಾತ್ರ ಗ್ರಾಮದ ಸಮಸ್ಯೆಗಳು ಆರೋಗ್ಯಪೂರ್ಣವಾಘಿ ನಿವಾರಣೆಯಾಗಲು ಪೂರಕವಾಗುತ್ತದೆ ಎಂದರು.
ನಿವೇಶನಕ್ಕೆ ಸಂಬಂದಿಸಿದಂತೆ ಸವರ್ೇ ಇಲಾಖೆ ಮತ್ತು ಪಿ.ಡಿ.ಒ ಗಳನ್ನು ಅಧ್ಯಕ್ಷರು ತರಾಟೆಗೆ ತೆಗೆದುಕೊಂಡ ಸಂದರ್ಭ ಕೂಡಾ ನಡೆಯಿತು. ಗ್ರಾ.ಪಂ.ನಲ್ಲಿ ಇರುವ ಖಾಲಿ ನಿವೇಶನಗಳನ್ನು ಗುರುತಿಸಿ ದಾಖಲೆಗಳನ್ನು ಇಲಾಖೆಗೆ ನೀಡುವಂತೆ ಎಲ್ಲಾ ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ಈವರಗೆ ಯಾವ ಅಭಿವ್ರದ್ದಿ ಅಧಿಕಾರಗಳು ಕೂಡಾ ಜವಬ್ದಾರಿಯಿಂದ ಕೆಲಸ ಮಾಡಿಲ್ಲ ಎಂದರು. ಅಲ್ಲದೆ ಪ್ರಶ್ನೆಯ ಸುರಿಮಳೆಗೈದರು. ನೀವು ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೀರಿ, ಯಾಕೆ ಜವಬ್ದಾರಿಯಿಂದ ಕೆಲಸ ಮಾಡಿಲ್ಲ, ಮಾಡಿಕೊಡದಿದ್ದರೆ ನಾವು ಬಿಡುವುದು ಕೂಡಾ ಇಲ್ಲ, ಪಿ.ಡಿ.ಒ.ಗಳಿಗೆ ಕೆಲವರಿಗೆ ಮಾತ್ರ ಇಚ್ಚಾಶಕ್ತಿ ಇದೆ. ಸಾರ್ವಜನಿಕರ ಕೆಲಸ ನನ್ನ ಸ್ವಂತ ಮನೆಯ ಕೆಲಸ ಎಂದು ಮಾಡಿದಾಗ ಎಲ್ಲ ಸರಿಯಾಗುತ್ತದೆ ಎಂದು ಖಾರವಾಗಿಯೇ ನುಡಿದರು.
ಮದ್ಯೆ ಮದ್ಯೆ ಮಾತನಾಡಿ ದಾರಿ ತಪ್ಪಿಸಬೇಡಿ, ಇದು ಸರಕಾರಿ ವ್ಯವಸ್ಥೆ ಅಲ್ಲ ಸರಕಾರಿ ಸೇವೆ, ನಿಜಾರ್ಥದಲ್ಲಿ, ಕಾಳಜಿಯಿಂದ ಕೆಲಸ ಮಾಡಿ, ನಾನು ಕೇಳಿದ್ದಕ್ಕೆ ಉತ್ತರಕೊಡಿ, ಎಲ್ಲವನ್ನು ತಿಳಿದುಕೊಂಡು ಮಾತನಾಡಿ, ಕಥೆ ಹೇಳಬೇಡಿ ಸಕರ್ಾರಿ ಕಚೇರಿಯಲ್ಲಿ ಪೇಪರ್ ಮಾತನಾಡುತ್ತದೆ ಕೆಲಸಗಾರರಲ್ಲ ಪಿ.ಡಿ.ಒಗಳಿಗೆ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಮುಡಿಪುವಿನಲ್ಲಿ ಘನತ್ಯಾಜ್ಯ ಘಟಕ ಕಾಮಗಾರಿಗೆ ಶಿಲಾನ್ಯಾಸ ಆಗಿ ಕೆಲವು ವರ್ಷಗಳೇ ಕಳೆದರೂ ಇನ್ನು ಕೂಡಾ ಕಾಮಗಾರಿ ಆರಂಬವಾಗಿಲ್ಲ. ನೀವು ಘಟಕ ಮಾಡುತ್ತೀರಾ ಇಲ್ಲವೇ, ಇಲ್ಲದಿದ್ದರೆ ಯಾಕೆ ಎಂದು ನಮಗೆ ಬರದುಕೊಡಿ ಎಂದು ಜಿ.ಪಂ.ಸದಸ್ಯ ಸಂತೋಷ್ ಕುಮಾರ್ ರೈ ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ನೀವು ಮಾಡದಿದ್ದರೆ ನಾವು ಸ್ವಂತ ಖಚರ್ಿನಲ್ಲಿ ಮಾಡುತ್ತೇವೆ. ಜನವರಿಯಿಂದ ಮೇವರೆಗೆ ಇಲ್ಲಿ ವಾಸನೆಯಲ್ಲಿ ನಿಲ್ಲಲೂ ಆಗುತ್ತಿಲ್ಲ. ಇಲ್ಲೇ ಹತ್ತಿರದಲ್ಲಿ ದೇವಸ್ಥಾನ ಶಾಲಾ ಕಾಲೇಜು ಕೂಡಾ ಇದೆ ಅವರಲ್ಲರೂ ಕೂಡಾ ವೇದನೆ ಅನುಭವಿಸುವಂತಾಗಿದೆ. ಎರಡು ದಿನಗಳಲ್ಲಿ ಕಾಮಗಾರಿಯನ್ನು ಆರಂಬಿಸುವ ಬಗ್ಗೆ ಅಧಿಕಾರಿಗಳು ಭರವಸೆಯನ್ನು ನೀಡಿದರು. ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಉಪಾಧ್ಯಕ್ಷೆ ವಿಲಾಸಿನಿ ಮತ್ತಿತರರು ಉಪಸ್ಥಿತರಿದ್ದರು.

2 (4)

3 (2)

4 (3)

5 (2)

 

By Suddi9

Leave a Reply

Your email address will not be published. Required fields are marked *