ಸುದ್ದಿ9ಬಂಟ್ವಾಳ: ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಬಂಟ್ವಾಳ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಬಂಟ್ವಾಳ ಮತ್ತು ಭಾರತೀಯ ಜೀವಾ ವಿಮಾ ನಿಗಮ, ಮಂಗಳೂರು ಇವರ ಸಹಯೋಗದೊಂದಿಗೆ ಅಹ್ಮ ಆದ್ಮಿ ವಿಮಾ ಯೋಜನೆಯಡಿ ಸ್ತ್ರೀಶಕ್ತಿ ಸದಸ್ಯೆಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ & ಸ್ತ್ರೀಶಕ್ತಿ ಗೊಂಚಲು ಪದಾಧಿಕಾರಿಗಳ ಸಭೆಯು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಮಂಗಳೂರು ಜೀವಾವಿಮಾ ಸಮೂಹ ಘಟಕದ ಡಿವಿಜನಲ್ ಮ್ಯಾನೇಜರ್ ಶಂಕರ್ ಹೆಗ್ಡೆ ಮಾತನಾಡಿ ಅಹ್ಮ ಆದ್ಮಿ ವಿಮಾ ಯೋಜನೆಯ ಪ್ರಯೋಜನವನ್ನು ಹೆಚ್ಚಿನ ಸ್ತ್ರೀಶಕ್ತಿ ಸದಸ್ಯೆಯರು ಪಡೆದುಕೊಳ್ಳಿ ಎಂದು ಕರೆನೀಡಿದರು. ಜಿಲ್ಲಾ ನಿರೂಪಣಾಧಿಕಾರಿ ಸುಂದರ ಪೂಜಾರಿ ಮಾತನಾಡಿ ಸ್ತ್ರೀಶಕ್ತಿ ಗುಂಪುಗಳಿಗೆ ಸರಕಾರದಿಂಧ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಸುನೀತಾ ಮತ್ತು ಕಾರ್ಯಕಾರಿ ಸಮಿತಿ ಸದಸ್ಯೆಯರು ಉಪಸ್ಥಿತರಿದ್ದರು. ಬಂಟ್ವಾಳ ಸಿಡಿಪಿಓ ಮಲ್ಲಿಕಾ ಸ್ವಾಗತಿಸಿ, ವಿಟ್ಲ ಸಿಡಿಪಿಓ ಸುಧಾ ಜೋಷಿ ವಂದಿಸಿ, ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಕಾರ್ಯಕ್ರಮ ನಿರೂಪಿಸಿದರು.
