ನವದೆಹಲಿ: ವಿದೇಶದಲ್ಲಿ ಬ್ಲಾಕ್ ಮನಿ ಹೊಂದಿರುವವರ ಬಗ್ಗೆ ಕೇಂದ್ರ ಒಂದೊಂದೇ ಹೇಳಿಕೆ ನೀಡುವ ಮೂಲಕ ಶ್ರೀಮಂತ ರಾಜಕಾರಣಿಗಳಲ್ಲಿ ಭಯಹುಟ್ಟಿಸಿತ್ತು. ಇದೀಗ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕಪ್ಪುಹಣ ಹೊಂದಿರುವವರ ಪಟ್ಟಿಯಲ್ಲಿ ಯುಪಿಎ ಸರ್ಕರದ ಸಚಿವರ ಹೆಸರುಗಳು ಇವೆ ಎಂದು ಹೇಳುವ ಮೂಲಕ ಇನ್ನೊಂದು ಬಾಂಬ್ ಸಿಡಿಸಿದ್ದಾರೆ.

ಈ ಬಗ್ಗೆ ನಾನು ಏನೂ ಹೇಳಲ್ಲ, ತಕ್ಕ ಸಮಯ ಬರಲಿ ಆಗ ಹೇಳ್ತೀನಿ..ಅಲ್ಲಿಯವರೆಗೆ ಕಾಯ್ತಾ ಇರಿ ಎಂದವರು ಹೇಳಿದ್ದಾರೆ.

ಮನಮೋಹನ್ ಸಿಂಗ್ ಸರ್ಕಾರದ ಸಚಿವರು ಈ ಪಟ್ಟಿಯಲ್ಲಿ ಇದ್ದಾರೆಯೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ, ನಾನು ಈ ಬಗ್ಗೆ ಮಾಹಿತಿಯನ್ನು ನೀಡಲ್ಲ. ಯಾಕೆಂದರೆ ಹಾಗೆ ಮಾಡಿದರೆ ನಾನು ಗೌಪ್ಯತೆಗೆ ಧಕ್ಕೆ ತಂದಂತೆ ಎಂದು ಹೇಳಿದ್ದಾರೆ.

ನಾವು ಯಾವುದೇ ವ್ಯಕ್ತಿ ಅಥವಾ ರಾಜಕಾರಣಿಯ ಮೇಲಿನ ಆರೋಪವನ್ನು ಸಾಬೀತು ಪಡಿಸಬೇಕೆಂದರೆ, ಅವರ ಹೆಸರನ್ನು ನ್ಯಾಯಾಲಯದಲ್ಲಿ ಹೇಳಲೇ ಬೇಕು. ಆ ಹೊತ್ತಿಗೆ ಅವರ ಹೆಸರು ಬಹಿರಂಗ ಆಗಿಯೇ ಆಗುತ್ತೆ. ಸದ್ಯ ನಾನು ಯಾವುದೇ ಮಾಹಿತಿಯನ್ನು ನೀಡಲು ಬಯಸುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ ಹೇಳಿದ್ದಾರೆ.
002p

By Suddi9

Leave a Reply

Your email address will not be published. Required fields are marked *