ಜಮ್ಮು-ಕಾಶ್ಮೀರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿಯ ದೀಪಾವಳಿ ಹಬ್ಬವನ್ನು ಜಮ್ಮು-ಕಾಶ್ಮೀರದಲ್ಲಿ ಸೈನಿಕ, ಸಂತ್ರಸ್ತರೊಂದಿಗೆ ಆಚರಿಸುತಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿರುವ ಮೋದಿ, ಪ್ರವಾಹ ಪೀಡಿತರ ಜೊತೆ ಹಬ್ಬ ಆಚರಣೆ ಮಾಡುತ್ತಿರುವುದು ವಿಶೇಷವಾಗಿದೆ.
ಜಮ್ಮು-ಕಾಶ್ಮೀರ ಭೇಟಿಗೂ ಮುನ್ನ ನವದೆಹಲಿಯಿಂದ ಸಿಯಾಚಿನ್ಗೆ ತೆರಳಿದ್ದು, ಯೋಧರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದೀಪಾವಳಿ ಹಬ್ಬದ ಶುಭದಿನದಂದು ಯೋಧರನ್ನು ಭೇಟಿ ಮಾಡುತ್ತಿರುವುದು ನನ್ನ ಸೌಭಾಗ್ಯ. ಎಲ್ಲರಿಗೂ ಸಿಯಾಚಿನ್ನಲ್ಲಿರುವ ಪರಿಸ್ಥಿತಿಯ ಬಗ್ಗೆ ಅರಿವಿದೆ ಎಂದು ಟ್ವಿಟರ್ನಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ.
ಮಾತೃಭೂಮಿ ರಕ್ಷಣೆಗಾಗಿ ಯೋಧರು ದುಡಿಯುತ್ತಿದ್ದಾರೆ. ದೇಶದ ಜನತೆಯ ಸಂದೇಶವನ್ನು ಯೋಧರಿಗೆ ತಲುಪಿಸುವೆ. ಯೋಧರ ಜತೆ ದೇಶದ ಜನತೆ ಸದಾ ಇರುತ್ತಾರೆ ಎಂಬ ಸಂದೇಶ ನೀಡುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.

001p

By Suddi9

Leave a Reply

Your email address will not be published. Required fields are marked *