ಬಂಟ್ಚಾಳ: ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿ ಹಾಗೂ ಆಚರಣೆಯಲ್ಲಿ ನಮ್ಮ ಬದುಕನ್ನು ಬೆಸೆಯುವ ಕೊಂಡಿಗಳು ಇಂದಿನ ಕಾಲ ಘಟ್ಟದಲ್ಲಿ ನಮ್ಮ ಧಾರ್ಮಿಕ ಆಚರಣೆಯೊಳಗೆ ವೈಜ್ಞಾನಿಕ ವಿಚಾರಗಳು ಇದ್ದು, ಇವುಗಳ ಹುಡುಕಬೇಕಿದೆ.ನಮ್ಮೊಳಗೆ ಧರ್ಮ ಜಾಗೃತಿ ಅಗತ್ಯವಿದೆ ಎಂದು ಧರ್ಮ ಜಾಗೃತಿ ಸಮನ್ವಯ ಡಾ.ಪ್ರಣಭ್ ಮಲ್ಯ ಕಿವಿ ಮಾತು ಹೇಳಿದರು.

ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ.)ಕಮ್ಮಾಜೆ ಹಾಗೂ ಮಾತೃ ವೃಂದ ಕಮ್ಮಾಜೆ ಇವರ ಆಶ್ರಯದಲ್ಲಿ ಕಮ್ಮಾಜೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ 25 ನೇ ವರುಷ ಮೊಸರು ಕುಡಿಕೆ ಉತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು..
ನಿವೃತ್ತಿ ಶಿಕ್ಷಕರಾದ ಗಂಗಾಧರ ರೈ ಅವರು ಅಧ್ಯಕ್ಷತೆಯನ್ನು ವಹಿಸಿದ್ದು, ಭಜಗರಂಗ ದಳದ ಸಹ ಸಂಯೋಜಕರು ಸಂತೋಷ್ ಸರಪಾಡಿ, ಬಿಗ್ ಬಾಸ್ ಸ್ಪರ್ಧಿಧನ್ ರಾಜ್ ಆಚಾರ್ಯ, ಹಿಂದೂ ಜಾಗರಣ ವೇದಿಕೆಯ ಪ್ರಣಿತ್ ವಾಮದ ಪದವು, ಕೆಎಂಎಫ್ ನಿರ್ದೇಶಕರಾದ ನಂದರಾಮ್ ರೈ, ಚೈತನ್ಯ ಶಿಕ್ಷಣ ಸಂಸ್ಥೆಯ ಸ್ಪಾಪಕರಾದ ವಿಜೇತಾ ಅಮೀನ್, ತೆಂಕಬೆಳ್ಳೂರು ಬಿ.ಜೆ.ಪಿ ಸಂಚಾಲಕರಾದ ಮುರಳಿಧರ ಶಟ್ಟಿ, ಸ್ಥಳ ದಾನಿ ನಾರಾಯಣ ಪೊಯ್ಯ,ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ವಸಂತ ಎಂ.,ಜೈ ತುಳುನಾಡ್ ಸಂಘದ ಗೌರವಾಧ್ಯಕ್ಷರಾದ ಜಗದೀಶ್ ರೈ,ಕಾವೇಶ್ವರ ಭಕ್ತ ವೃಂದದ ಅಧ್ಯಕ್ಷರಾದ ಸುರೇಶ್, ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ಗಣೇಶ್ ಕುಮಾರ್,
ಉಪಸ್ಥಿತರಿದ್ದರು.
ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಧಾರ್ಮಿಕ ಮುಖಂಡ ಸತ್ಯ ಜಿತ್ ಸುರತ್ಕಲ್, ದ. ಕ. ಜಿಲ್ಲಾ ಬಿ.ಜೆ.ಪಿ ವಕ್ತಾರರಾದ ಮಾಧವ ಮಾವೆ ಅವರು ಅಗಮಿಸಿ ಶುಭ ಹಾರೈಸಿದರು.
ಬಿಜೆಪಿ ಮುಖಂಡರಾದ ಸಂದೇಶ್ ಶೆಟ್ಟಿ ಅಗ್ರಜಾ ಕ್ರೀಡಾಂಗಣ ಉದ್ಘಾಟನೆ ನೆರವೇರಿಸಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸ್ಥಳೀಯ ಸಾಧಕರನ್ನು ಹಾಗೂ ಸಮಾಜಮುಖಿ ಚಿಂತಕರನ್ನು ಸನ್ಮಾನಿಸಲಾಯಿತು.
ಇದಕ್ಕು ಮೊದಲು ಆಟೋಟ ಹಾಗೂ ವಿವಿಧ ಸ್ಪರ್ಧೆಯನ್ನು ನಡೆಸಲಾಯಿತು. ಸಂಘ ಕೋಶಾಧಾರಿ ತಿರುಲೇಶ್ ಪ್ರಸ್ತಾವಿಸಿ ಸ್ವಾಗತಿಸಿದರು. ಸುರೇಶ್. ಎಸ್.ನಾವೂರು ಕಾರ್ಯಕ್ರಮ ನಿರೂಪಿಸಿದರು..
ರಂಜಿತ್ ಕಮ್ಮಾಜೆ, ದಿಶಾ ಕಮ್ಮಾಜೆ ದಿನೇಶ್ ವರಕೋಡಿ ಕ್ರೀಡಾ ಚಟುವಟಿಕೆ ನೇವರಿಸಿದರು. ರಾಜೇಶ್ ವಂದಿಸಿದರು.
