ಬಂಟ್ವಾಳ:ಮಂಗಳೂರು ಗ್ರಾಮಾಂತರ ಜಿಲ್ಲೆ ವಿಶ್ವ ಹಿಂದೂ ಪರಿಷದ್, ಬಜರಂಗದಳ ಪರಶುರಾಮ ಶಾಖೆ ಬಂಟ್ವಾಳ ನಗರ, ಬಂಟ್ವಾಳ ಪ್ರಖಂಡ ಇವರ ಆಶ್ರಯದಲ್ಲಿ  ಎ.ಜೆ. ಆಸ್ಪತ್ರೆ ಮತ್ತು ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆಬೃಹತ್ ರಕ್ತದಾನ ಶಿಬಿರ ಹಾಗೂ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ವತಿಯಿಂದ  ಸಮಗ್ರ ಅಪಘಾತ ಮತ್ತು ಆರೋಗ್ಯ ವಿಮಾ ಅಭಿಯಾನವು ಬಂಟ್ವಾಳ ಬೈಪಾಸ್ ನಲ್ಲಿರುವ ಭಂಡಾರಿ ಸಭಾ ಭವನದಲ್ಲಿ‌ ಭಾನುವಾರ ನಡೆಯಿತು‌.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಶಿಬಿರದಲ್ಲಿ ಭಾಗವಹಿಸಿ ರಕ್ತದಾನದ ಮಹತ್ವ ಹಾಗೂ ಸಂಘಟನೆಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.

ವಿಶ್ವ ಹಿಂದೂಪರಿಷದ್ನ ಕರ್ನಾಟಕ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅರ್ಜುನ್ ಭಂಡಾರ್ ಕಾರ್ ಬಂಟ್ವಾಳ ಅವರು ಶಿಬಿರವನ್ನು‌ಉದ್ಘಾಟಿಸಿ ಶುಭ ಹಾರೈಸಿದರು.ವಿ.ಹಿಂ.ಪ.ನ ಬಂಟ್ವಾಳ ಪ್ರಖಂಡದ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ,ವಿ.ಹಿ.ಪ., ಬಜರಂಗದಳ ಮುಖಂಡರಾದ ಶಿವಾನಂದ ಮೆಂಡನ್, ಭುಜಂಗ ಕುಲಾಲ ಲೋಹಿತ್ ಪಣೋಲಿಬೈಲ್, ಸಚಿನ್‌ ಮೇಲ್ಕಾರ್, ಗೋಪಾಲ್ ಕುತ್ತಾರ್, ಸಂತೋಷ್ ಸರಪಾಡಿ,ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ, ಕೇಶವ ದೈಪಲ
ವಿ.ಹಿ.ಪ.ನ ಪರಶುರಾಮ ಶಾಖೆಯ ಪದಾಧಿಕಾರಿಗಳು,ಕಾರ್ಯಕರ್ತರು ,ಸ್ಥಳೀಯ ಹಿಂದೂ ಮುಖಂಡರು ಉಪಸ್ಥಿತರಿದ್ದರು.
ಈ ಸದಿಬಿರದಲ್ಲಿ ಸುಮಾರು 203 ಯೂನಿಟ್ ರಕ್ತದಾನ ಸಂಗ್ರಹಿಸಲಾಯಿತು. ಸುಮಾರು 60 ಮಂದಿಗೆ ಅರೋಗ್ಯ ವಿಮೆ ಮಾಡಿಕೊಡಲಾಯಿತು.

By Suddi9

Leave a Reply

Your email address will not be published. Required fields are marked *