ಬಂಟ್ವಾಳ: ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ 2025 -26 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಸಜೀಪ ಮಾಗಣೆ ತಂತ್ರಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ಸುಬ್ರಹ್ಮಣ್ಯ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು.


ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯು ಉತ್ತಮ ಸಾಧನೆ ಸಾಧಿಸಿ ಹೆತ್ತವರು,ವಿದ್ಯಾಸಂಸ್ಥೆ ಹಾಗೂ ಊರಿಗೂ ಒಳ್ಳೆಯ ಹೆಸರು ಗಳಿಸಿ ಆದರ್ಶ ವಿದ್ಯಾರ್ಥಿಗಳಾಗಬೇಕು ಎಂದರು. ಪ್ರಾಂಶುಪಾಲರಾದ ಡಾ. ಎನ್ ಎಸ್. ಜೈರಾಭಿ ವಿದ್ಯಾರ್ಥಿಗಳಿಗೆ  ಶುಭ ಹಾರೈಸಿದರು.


ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷರು ಶ್ರೀಕಾಂತ್ ಶೆಟ್ಟಿ ಸಂಕೇಶ್ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದರು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವಿಶ್ವನಾಥ ಕೊಟ್ಟಾರಿ, ನಿಕಟ ಪೂರ್ವ ಪ್ರಭಾರ ಪ್ರಾಂಶುಪಾಲರಾದ ಸುರೇಶ ಕುಮಾರ್ ಐತಾಳ್ ಶುಭ ಹಾರೈಸಿದರು.


ಇದೇ ವೇಳೆ ಕಳೆದ ವರ್ಷ  ಸಂಸ್ಥೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ  ವಿದ್ಯಾರ್ಥಿನಿಯರಾದ ಕು. ಅಸ್ಪಿಯಾ ಮತ್ತು ಆಯಿಷತ್ ಮುಬಿನಾ ಬಾನು ಅವರನ್ನು  ಅಭಿನಂದಿಸಲಾಯಿತುಹಿರಿಯ ಉಪನ್ಯಾಸಕರಾದ ಬಾಲಕೃಷ್ಣ ನಾಯ್ಕ್, ಕೆ, ಬೆಳ್ಳಾರೆ,  ಶೋಭಾ, ಸಿಂಧೂಜ,, ವೇದಾವತಿ, ಗುಮಾಸ್ತೆ ಲತಾ, ಸಂಜೀವ ಪೂಜಾರಿ ಮೊದಲಾದವರಿದ್ದರು.


ಕಾಲೇಜಿನ ಉಪಾನ್ಯಾಸಕರಾದ ಕು. ಸ್ಪೂರ್ತಿ ಸ್ವಾಗತಿಸಿದರು.ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.ಭಾರತಿ
ಸನ್ಮಾನಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.ಬಾಲಕೃಷ್ಣ ಎನ್ .ವಿ. ವಂದಿಸಿದರು.

By Suddi9

Leave a Reply

Your email address will not be published. Required fields are marked *