ಬಂಟ್ವಾಳ: ಫರಂಗಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಪುಂಚಮೆ ಪದ್ಮನಾಭ ಶೆಟ್ಟಿ ಹಾಗೂಉಪಾಧ್ಯಕ್ಷರಾಗಿ ಪವನ್ಅಬ್ಬೆಟ್ಟುಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮಂಗಳೂರು ಸಹಕಾರ ಅಭಿವೃದ್ಧಿಅಧಿಕಾರಿ ಡಾ.ಜ್ಯೋತಿ ಚುನಾವಣಾಧಿಕಾರಿಯಾಗಿ ನಡೆಸಿಕೊಟ್ಟರು.ಸಂಘದ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

ನಿರ್ದೇಶಕರುಗಳಾದ ಜೀವನ ಪ್ರಕಾಶ್ ಡಿಸೋಜ , ಪ್ರತಾಪ್ ಆಳ್ವ , ಸುನೀಲ್ ಫೆರ್ನಾಂಡಿಸ್ , ಸುಬ್ರಮಣ್ಯ ರಾವ್ , ಪಿ ಹರೀಶ್ , ಸಂತೋಷ್ ಕುಮಾರ್ , ಶೈಲಜಾ ಪಿ ಶೆಟ್ಟಿ , ವನಿತಾ ಶೆಟ್ಟಿ , ಪ್ರವೀಣ್ , ಜಯಾನಂದ ಹಾಜರಿದ್ದರು.
ಬಿಜೆಪಿ ಪ್ರಮುಖರಾದ ರಾಜ್ಯ ಸಹಕಾರಿ ರತ್ನ ಪುರಸ್ಕೃತ ರವೀಂದ್ರ ಕಂಬಳಿ ,ಗಣೇಶ್ ಸುವರ್ಣ ತುಂಬೆ, ಪದ್ಮನಾಭ ಶೆಟ್ಟಿ ಕೊಟ್ಟಿಂಜ ,ಸತೀಶ್ ನಾಯ್ಗ ,ದಿನೇಶ್ ಶೆಟ್ಟಿ ಕೊಟ್ಟಿಂಜ , ಜಯಶ್ರೀ ಕರ್ಕೇರ , ಸುಕೇಶ್ ಶೆಟ್ಟಿ ತೇವು , ನಾರಾಯಣ . ಬಿ , ಸುದಾಮ ರೈ , ಗಂಗಾಧರ ಪೂಜಾರಿ ಮತ್ತಿತರರು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭಹಾರೈಸಿದರು.
