
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗಿತ್ತು. ಅನೇಕ ಕಡೆ ಶಾಸಕರು, ಸಚಿವರು, ಅಧಿಕಾರಿಗಳು ಕೂಡ ಸ್ವಾತಂತ್ರ್ಯ ದಿನಾಚರಣೆಗಳನ್ನು ಆಚರಣೆ ಮಾಡಿದ್ದಾರೆ. ಹಲವು ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲೂ, ಬೇರೆ ಬೇರೆ ಸಂಘ – ಸಂಸ್ಥೆಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಭಾರೀ ವಿಭಿನ್ನವಾಗಿ ಆಚರಣೆಯೊಂದನ್ನು ಹೋಟೆಲ್ ಮಾಲೀಕರೊಬ್ಬರು ಮಾಡಿದ್ದಾರೆ.
ಗುರುಪುರ ಕೈಕಂಬದ ಸ್ವಾಗತ್ ಹೋಟೆಲ್ನಲ್ಲಿ ಒಂದು ವಿಭಿನ್ನ ರೀತಿಯಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಮಾಡಲಾಗಿತ್ತು. ಸ್ವಾಗತ್ ಹೋಟೆಲ್ ಸಿಬ್ಬಂದಿ ಸೇರಿ ಈ ಆಚರಣೆಯನ್ನು ಸಂಭ್ರಮದಿಂದ ಮಾಡಿದ್ದಾರೆ. ಪ್ರತಿ ವರ್ಷ ಈ ರೀತಿಯಲ್ಲೇ ಆಚರಣೆ ಮಾಡುತ್ತಾರೆ. ಸ್ವಾತಂತ್ರ್ಯ ದಿನದಂದು ಈ ಹೋಟೆಲ್ ಸಿಬ್ಬಂದಿಗಳಿಗೆ ರಜೆಯನ್ನು ನೀಡಿ ಸ್ವಾತಂತ್ರ್ಯ ಆಚರಣೆ ಮಾಡಲಾಗುವುದು.

ಸ್ವಾಗತ್ ಹೋಟೆಲ್ ಮಾಲೀಕರು ಕೂಡ ಈ ಸಂಭ್ರಮದಲ್ಲಿ ಭಾಗವಹಿಸುತ್ತಾರೆ. ಹೋಟೆಲ್ ಮಾಲೀಕ ಜಗದೀಶ್ ಅವರು ಈ ರೀತಿಯ ಸಂಪ್ರಾದಾಯವನ್ನು ಮಾಡಿಕೊಂಡು ಬಂದಿದ್ದಾರೆ. ಹೋಟೆಲ್ ಟೇಬಲ್ ಮೇಲೆ ವಿಭಿನ್ನ ರೀತಿಯ ರಂಗೋಲಿಗಳನ್ನು ಬಿಡಿಸಿ, ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡುತ್ತಾರೆ. ಪರಿವಾಳ, ಭಾರತದ ಭೂಪಟ ಈ ರೀತಿಯ ರಂಗೋಲಿಗಳನ್ನು ಬಿಡಿಸಿ, ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸುತ್ತಾರೆ.
