ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಧರ್ಮದೈವ ಕ್ಷೇತ್ರದ ಅಪಪ್ರಚಾರ ಮತ್ತು ಬಂಟ್ವಾಳ ಶಾಸಕರ ಹೆಸರನ್ನು ಕೆಡಿಸುವ ರೀತಿಯಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿರುವ ಇಬ್ಬರು ವ್ಯಕ್ತಿಗಳಿಗೆ ಶಿಕ್ಷೆ ನೀಡಬೇಕು ಎಂದು ಕಕ್ಯ ಗುತ್ತಿನ ಭಂಡಾರದ ಮನೆಯವರು ಹಾಗೂ ಗ್ರಾಮದ ಪ್ರಮುಖರು ಸಂಕ್ರಾಂತಿ ದಿನವಾದ ಗುರುವಾರ ಪ್ರಾರ್ಥಿಸಿ ಹರಕೆ ನೀಡಿ ಬಳಿಕ ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿಯು ಅದೇ ರೀತಿಯಲ್ಲಿ ದೇವರಲ್ಲಿ ಕೂಡ ಪ್ರಾರ್ಥಿಸಲಾಯಿತು.

ಬಂಟ್ವಾಳ ತಾಲೂಕಿನ ಕಕ್ಯಪದವು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಕ್ಯೆಪದವು ದೇವಸ್ಥಾನದಿಂದ ಕಕ್ಯೆ ಗುತ್ತಿನ ಭಂಡಾರದ ಮನೆಗೆ ಹೋಗುವ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ರೂ. 10 ಲಕ್ಷ ರೂ.ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡಲಾಗಿತ್ತು.

ಅದರೆ ಕ್ಷೇತ್ರಕ್ಕೆ ಸಂಬಂಧಪಡದ ಖಾಸಗಿ ವ್ಯಕ್ತಿಗಳಿಬ್ಬರು ಯಾವುದೋ ದುರುದ್ದೇಶದಿಂದ ಸಮಿತಿಯ ಗಮನಕ್ಕೆ ತಾರದೆ ಈ ರಸ್ತೆಯ ಬಗ್ಗೆ ತಪ್ಪು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ.ಇದರಿಂದಾಗಿ ದೈವದ ಭಂಡಾರದ ಮನೆಯ ಮರ್ಯಾದೆಯನ್ನು ಕೆಡಿಸಿದ್ದಲ್ಲದೆ ಶಾಸಕರು ನೀಡಿದ ಭರವಸೆಯಂತೆ ರಸ್ತೆಗೆ ಕಾಂಕ್ರೀಟೀಕರಣಗೊಳಿಸಿ ಅಭಿವೃದ್ಧಿ ಪಡಿಸಿದರೂ ಶಾಸಕರ ತೇಜೋವಧೆ ಮಾಡಿ ಸುಳ್ಳು ಹೇಳಿಕೆಯನ್ನು ಪ್ರಚುರ ಪಡಿಸಲಾಗಿದೆ ಎಂದು ಸಮಿತಿಆರೋಪಿಸಿದೆ.
ಕ್ಷೇತ್ರದ ಹಾಗೂ ಶಾಸಕರ ವಿರುದ್ಧ ಅಪಪ್ರಚಾರಗೈದ ಖಾಸಗಿ ವ್ಯಕ್ತಿಗಳಿಬ್ಬರಿಗೆ ಇಲ್ಲಿನ ದೈವಶಕ್ತಿಗಳು ಶಿಕ್ಷೆ ನೀಡಬೇಕು ಎಂದು ದೈವಸಾನದ ಮುಂದೆ ಭಂಡಾರದ ಮನೆಯ ದೈವದ ಪ್ರಮುಖ ಪಾತ್ರಿ ಶೇಖರ ಪೂಜಾರಿ ಪ್ರಾರ್ಥಿಸಿದರು.ಕಕ್ಯೆಪದವು ದೇವಸ್ಥಾನದ ಮುಂಭಾಗದ ರಸ್ತೆಗೆ ಕಾಂಕ್ರೀಟೀಕರಣಗೊಳಿಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಇಗೆ ಸ್ಥಳೀಯ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಕಕ್ಯೆ ಗುತ್ತಿನ ಭಂಡಾರದ ಮನೆಗೆ ಹೋಗುವ ಸಂಪರ್ಕ ರಸ್ತೆಗೆ 10 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗಿತ್ತು.
ಅ ಬಳಿಕ ಸುಮಾರು 1.25 ಲಕ್ಷ ಅನುದಾನದ ಮೂಲಕ ಕ್ಷೇತ್ರಕ್ಕೆ ದಾರಿ ದೀಪವನ್ನು ಒದಗಿಸಿಕೊಟ್ಟಿದ್ದರು.ಅದೇರೀತಿ ಇಲ್ಲಿನ ಬ್ರಹ್ಮ ಕಲಶೋತ್ಸವ ವೇಳೆ ವೈಯಕ್ತಿಕ ಸಹಾಯವನ್ನು ಮಾಡಿದ್ದಾರೆ. ಇದರ ಜೊತೆಗೆ ಭಂಡಾರದ ಮನೆಗೆ ಬರುವ ದಾರಿಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ವರ್ಗ ಜಮೀನಲ್ಲಿ ರಸ್ತೆಯೊಂದಿದ್ದು ಇದಕ್ಕೆ ಕಾಂಕ್ರೀಟ್ ಮಾಡಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದಾಗ, ಖಾಸಗಿ ಜಮೀನಿನಲ್ಲಿ ಈ ರಸ್ತೆ ಇರುವುದರಿಂದ ಸರಕಾರದ ನಿಯಮ ಪ್ರಕಾರ ರಸ್ತೆಯ ಹಕ್ಕನ್ನು ಗ್ರಾಮಪಂಚಾಯತ್ ಗೆ ವರ್ಗಾಯಿಸಿ ಕೂಡಲೇ ಶಾಸಕರ ನಿಧಿಯಿಂದ ಕಾಂಕ್ರೀಟ್ ಕಾಮಗಾರಿ ಮಾಡಿಕೊಡುವ ಭರವಸೆ ನೀಡಿದ್ದಾರೆ .ಆದರೆ ಕುಟುಂಬದ ಒರ್ವ ಹಾಗೂ ಇಲ್ಲಿಗೆ ಸಂಬಂಧಪಡದ ವ್ಯಕ್ತಿಗಳಿಬ್ಬರು ಸೇರಿ ಕ್ಷೇತ್ರಕ್ಕೆ ಹಾಗೂ ಶಾಸಕರಿಗೆ ಅಪಪ್ರಚಾರ ಮಾಡಿರುವದನ್ನು ದೈವದ ಜೀರ್ಣೊಧ್ದಾರ ಸಮಿತಿ ಸದಸ್ಯ ಪ್ರಭಾಕರ್ ಅಂಚನ್ ಖಂಡಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ರಮೇಶ್ ನಾಲೋಡಿ ಹಾಗೂ ಸಮಿತಿಯ ಪ್ರಮುಖರು ಹಾಜರಿದ್ದರು.
