ಕೈಕಂಬ : ಯೂತ್ ಕಾಂಗ್ರೆಸ್ ಗುರುಪುರ ಹಾಗೂ ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಇದರ ವತಿಯಿಂದ ಗುರುಪುರ ಕೈಕಂಬದ ರೋಸಾ ಮಿಸ್ತಿಕಾ ಶಾಲಾ ಮೈದಾನದಲ್ಲಿ ನ. ೧೩ ಮತ್ತು ನ. ೨೦ರಂದು ಆಯೋಜಿಸಲಾದ ದಿ. ಆಸ್ಕರ್ ಫೆರ್ನಾಂಡಿಸ್ ಸ್ಮರಣಾರ್ಥ ಆಸ್ಕರ್ ಟ್ರೋಫಿ-೨೦೨೨' ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಟೆನ್ ಕೈಕಂಬ’ ಭರ್ಜರಿ ವಿಜಯ ಸಾಧಿಸಿ ಟ್ರೋಫಿ ತನ್ನದಾಗಿಸಿತು. ಆರ್‌ಡಿ ಬಾಯ್ಸ್ ಗುರುಪುರ ರನ್ನರ್ಸ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ನ. ೨೦ರಂದು ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾಜಿ ಶಾಸಕ ಮೊಯಿದಿನ್ ಬಾವಾ ಮಾತನಾಡಿ, ಓಪನ್ ಟು ಆಲ್ ಕ್ರಿಕೆಟ್ ಟೂರ್ನಿ ನಡೆಸಿದ ಸಂಘಟಕರ ಜಾತ್ಯತೀತ ಭಾವನೆಗೆ ನನ್ನದೊಂದು ಸೆಲ್ಯೂಟ್. ಇಂತಹ ಟೂರ್ನಿಯಿಂದ ಯುವ ಮನಸ್ಸುಗಳ ಪ್ರೀತಿ ಬಾಂಧವ್ಯಕ್ಕೆ ಕಾರಣವಾಗುತ್ತವೆ ಎಂದರು.

ಮಾಜಿ ಎಂಎಲ್‌ಸಿ ಐವನ್ ಡಿ’ಸೋಜ ಮಾತನಾಡಿ, ಸರ್ಕಾರದಿಂದ ಕ್ರೀಡೆಗೆ ಹೆಚ್ಚು ಉತ್ತೇಜನ ಸಿಗವಂತಾಗಬೇಕು. ದೇಶದ ಓರ್ವ ಪ್ರಾಮಾಣಿಕ ರಾಜಕಾರಣಿಯ(ಆಸ್ಕರ್ ಫೆರ್ನಾಂಡಿಸ್) ಸ್ಮರಣಾರ್ಥ ನಡೆಯುತ್ತಿರುವ ಕ್ರಿಕೆಟ್ ಟೂರ್ನಿ ಯುವ ಪೀಳಿಗೆಯ ಭಾವೈಕ್ಯತೆಗೆ ಸಹಕಾರಿಯಾಗಲಿ ಎಂದರು.

ಸಮಾರಂಭದಲ್ಲಿ ರೋಸಾ ಮಿಸ್ತಿಕಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಡಾ. ಲೊಲಿಟಾ ಪಿರೇರ, ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಸದಸ್ಯೆಯರಾದ ಶೋಭಾ ಎ. ಮತ್ತು ಬಬಿತಾ, ಕಾಂಗ್ರೆಸ್ಸಿಗರಾದ ಮೀನಾ ಟೆಲ್ಲಿಸ್, ಗ್ಲಾಡಿಸ್, ಬಾಷಾ ಬಂಗ್ಲೆಗುಡ್ಡೆ, ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಸಂಘಟಕ ಹಾಗೂ ಗುರುಪುರ ಕೈಕಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಮೆಲ್ವಿನ್ ಸಲ್ಡಾನ, ಲ. ಜೆಫ್ರಿಯನ್ ತಾವ್ರೋ, ಟೂರ್ನಿ ಆಯೋಜನೆಯ ಪ್ರಮುಖರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *