ಕೈಕಂಬ: ಕಂದಾವರ ಗ್ರಾಮದ ಕಂದಾವರ ಬೈಲು ಶ್ರೀ ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ದಾರ ಕಾರ್ಯ ಕೈಗೊಳ್ಳುವ ಸಭೆ ಕೋರ್ದಬ್ಬು ದೈವಸ್ಥಾನದ ವಠಾರದಲ್ಲಿ ನಡೆಯಿತು,

ಅದ್ಯಪಾಡಿ ಶ್ರೀ ಆಧಿನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ ಬಬ್ಬು ಸ್ವಾಮಿ ಪರಿವಾರ ದೈವಗಳ ಈ ದೈವಸ್ಥಾನ ಬಬ್ಬು ಸ್ವಾಮಿಯು ದರುಶನ ಸಂದರ್ಭದಲ್ಲಿ ನುಡಿದ ಪ್ರಕಾರ ಮತ್ತು ದೈವಸ್ಥಾನವು ಬಹುತೇಕ ಅಜೀರ್ಣ ಸ್ಥಿತಿಯಲ್ಲಿ ಇರುವುದರಿಂದ ಜೀರ್ಣೋದ್ದಾರ ಕಾರ್ಯ ಅನಿವಾರ್ಯವಾಗಿದ್ದು ಅದಕ್ಕಾಗಿ ಗ್ರಾಮಸ್ಥರ ಸಹಕಾರದಿಂದ ಅದಕ್ಕೆ ಯೋಜನೆ ರೂಪಿಸಿ ಮುಂದುವರಿಯ ಬೇಕಾಗಿದ್ದು ಮಾಗಣೆಯ ಅದ್ಯಪಾಡಿ ಆಧಿನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಆದ ನಂತರ ಕೆಲಸವನ್ನು ಪ್ರಾರಂಭಿಸಬೇಕಿದೆ ಎಂದರು.

ಬೈಲು ಏತಮೊಗರು ಗುತ್ತು ರಮಾನಾಥ್ ಅತ್ತಾರ್ (ಚಿತ್ತಣ್ಣ)ಮಾತನಾಡಿ ಕಂದಾವರ ಗ್ರಾಮದಲ್ಲಿ ಹಲವಾರು ಕೋರ್ದಬ್ಬು ದೈವಸ್ಥಾನ ಗಳಿದ್ದರೂ ಬಬ್ಬುವಿನ ಮೂಲ ಸ್ಥಾನ ಇದಾಗಿದೆ ಬಬ್ಬು ಸ್ವಾಮಿಯ ಅನುಗ್ರಹ ಮತ್ತು ಕಂದಾವರ ಮೇಗಿನ ಮನೆಯ ಪ್ರಕಾಶ್ ಶೆಟ್ಟಿಯವರ ಮುಂದಾಳತ್ವದಲ್ಲಿ ಗ್ರಾಮಸ್ಥರ ಸಹಕಾರದಿಂದ ಮುಂದಕ್ಕೆ ಜೀರ್ಣೋದ್ದಾರ ಕಾರ್ಯ ವ್ಯವಸ್ಥಿತವಾಗಿ ನಡೆಯಲಿದೆ ಎಂದರು,

ಸಭೆಯಲ್ಲಿ ಅದ್ಯಪಾಡಿ ಆಧೀನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಸುಜಿತ್ ಆಳ್ವ ಏತಮೊಗರು ಗುತ್ತು, ವಿನೋದ್ ಮಾಡ ಕೈಕಂಬ ,ಹರಿಯಪ್ಪ ಶೆಟ್ಟಿ ಕಂದಾವರ ಗುತ್ತು ಹಿರಿಯರಾದ ,ಮಹಾಬಲ ಶೆಟ್ಟಿ ಕಂದಾವರ, ಚಂದ್ರಹಾಸ ಶೆಟ್ಟಿ ಬೈಲು ತೇಂಜ, ನಾರಾಯಣ ಪೂಜಾರಿ( ಗುರು ಸ್ವಾಮಿ) ,ವಿಶ್ವನಾಥ್ ಶೆಟ್ಟಿ ಕಂದಾವರ ಮೇಗಿನ ಮನೆ, ಬಿಲ್ಲವ ಸಮಾಜ ಸೇವಾ ಸಂಘ ಕಂದಾವರ ಇದರ ಅಧ್ಯಕ್ಷರಾದ ಸಂತೋಷ್ ಪೂಜಾರಿ ಪ್ರಭಾಕರ ಆಚಾರ್ಯ ಕಂದಾವರ ,ಮನೋಹರ ಶೆಟ್ಟಿ ಏತಮೊಗರು ,ಗುತ್ತು ,ಪ್ರಕಾಶ್ ಶೆಟ್ಟಿ ಕಂದಾವರ ಮೇಗಿನ ಮನೆ,ಕೋರ್ದಬ್ಬು ದೈವಸ್ಥಾನದ ಪರಿಚಾರಕ ವರ್ಗದ ಗುರಿಕಾರ ನಾಗಪ್ಪ ಕಂದಾವರ , ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ ರಾಯರ ಕೋಡಿ ,ಸುರೇಂದ್ರ ಶೇಣವ ದೇವಸ ಕಂದಾವರ, ವಿನಯ ಶೆಟ್ಟಿ ಕುಟೇಲು,ಶ್ರೀನಾಥ್ ಶೆಟ್ಟಿ ಬೈಲು ತೇಂಜ , ದೀಪಕ್ ಕಂದಾವರ ಪದವು ,ದಿನೇಶ್ ಕಂದಾವರ ಪದವು ,ಶ್ರೀಮತಿ ಸುಜಾತ ಕಂದಾವರ ಪದವು ಮೋಹನ್ ಶೆಟ್ಟಿ ,ವಿಶ್ವನಾಥ್ ಕೋಟ್ಯಾನ್ ,ಹರೀಶ್ ಶೆಟ್ಟಿ ಕಂದಾವರ ,ದೈವಸ್ಥಾನದ ಪರಿಚಾರಕ ವರ್ಗದವರು ಕಂದಾವರ ಮೇಗಿನ ಮನೆಯವರು ಮತ್ತು ಭಕ್ತರು ಉಪಸ್ಥಿತರಿದ್ದರು, ಸತೀಶ್ ಶೆಟ್ಟಿ ಕಂದಾವರ ಕಾರ್ಯಕ್ರಮ ನಿರೂಪಿಸಿದರು

