ನವದೆಹಲಿ/ತಿರುವನಂತಪುರಂ: ಗಾಂಧಿ ಕುಟುಂಬದ (Gandhi Family) ಯಾರೊಬ್ಬರೋ ಕಾಂಗ್ರೆಸ್ (Congress) ಮುಖ್ಯಸ್ಥರಾಗಬಾರದೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸ್ಪಷ್ಟಪಡಿರುವುದಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ (Bharat Jodo Yatra) ಯಲ್ಲಿ ಪಾಲ್ಗೊಂಡಿರುವ ಸಿಎಂ (Rajasthan Chief Minister), ಕೇರಳದಲ್ಲಿ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಎಲ್ಲರ ಆಶಯದಂತೆ ಕಾಂಗ್ರೆಸ್ (Congress) ಅಧ್ಯಕ್ಷರಾಗಿ ಮರಳಲು ಸಾಕಷ್ಟು ಬಾರಿ ಅವರಲ್ಲಿ ವಿನಂತಿಸಿದೆ. ಆದರೆ ರಾಹುಲ್ ಜೀ ಅವರು, ನಾನು ಎಲ್ಲರ ಆಶಯವನ್ನು ಗೌರವಿಸುತ್ತೇನೆ. ಆದರೆ ಒಂದೇ ಒಂದು ಕಾರಣಕ್ಕಾಗಿ ಗಾಂಧಿ ಕುಟುಂಬೇತರರು ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ನಿರ್ಧರಿಸಿದ್ದೇನೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಬಿಜೆಪಿಯ (BJP) ಸ್ವಜನ ಪಕ್ಷಪಾತದ ಆರೋಪವೇ ರಾಹುಲ್ ಗಾಂಧಿ ಈ ನಿರ್ಧಾರಕ್ಕೆ ಕಾರಣ ಎಂದು ಪ್ರಶ್ನಿಸಿದ ಮಾಧ್ಯಮಗಳಿಗೆ ಉತ್ತರಿಸಿದ ಅವರು, 2019 ರಲ್ಲಿ ಯಾವುದೇ ಹುದ್ದೆಗಳಿಲ್ಲದೇ ಕೆಲಸ ಮಾಡುವುದಾಗಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ತಿಳಿಸಿದ್ದರು. ಅದರಂತೆ ಅವರು ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

By Suddi9

Leave a Reply

Your email address will not be published. Required fields are marked *