ಮೂಡಬಿದಿರೆ: ಸಮಾಜದಲ್ಲಿ ನೊಂದವರ ಪಾಲಿನ ಆಶಾಕಿರಣವಾಗಿ ಕೆಲಸವನ್ನು ಮಾಡುತ್ತಿದ್ದ ಭಗತ್ ಸೇನೆ (ರಿ.) ಮೂಡುಬಿದಿರೆ ಇನ್ನು ಮುಂದೆ ಭಗತ್ ಸಿಂಗ್ ಸೇವಾ ಟ್ರಸ್ಟ್ ಮೂಲಕ ನಿಮ್ಮ ಮುಂದೆ ಬರಲಿದೆ.

ಇಂದು ಮೂಡಬಿದಿರೆಯ ಸಮಾಜಮಂದಿರದಲ್ಲಿ ನಡೆದ ಸಭೆಯಲ್ಲಿ ಸದಸ್ಯರ ಸಮ್ಮುಖದಲ್ಲಿ ಈ ನಿರ್ಧಾರ ಮಾಡಲಾಯ್ತು. ಇಲ್ಲಿವರೆಗೆ ಭಗತ್ ಸೇನೆ (ರಿ.) ಮೂಡುಬಿದಿರೆ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿ ನೊಂದವರ ಬಾಳಿನಲ್ಲಿ ಬೆಳಕು ಮೂಡಿಸಿದೆ. ಇಲ್ಲಿವರೆಗೆ ಹಲವಾರು ಸೇವಾ ಕಾರ್ಯಗಳನ್ನ ಮಾಡಿರುವ ಭಗತ್ ಸೇನೆಯನ್ನ ಇನ್ನಷ್ಟು ಬಲಿಷ್ಠವಾಗಿಸಲು ಸೇವಾ ಟ್ರಸ್ಟ್ ಅನ್ನೋ ಹೆಸರಿನಲ್ಲಿ ಬರುತ್ತಿದೆ.

ಹೊಸ ಹೊಸ ಯೋಜನೆಗಳನ್ನ ರೂಪಿಸಿ ಅದನ್ನ ಕಾರ್ಯಗತ ಮಾಡಿರುವ ಭಗತ್ ಸೇನೆ (ರಿ.) ಮೂಡುಬಿದಿರೆ ಇಲ್ಲಿವರೆಗೆ ಸುಮಾರು 40ಕ್ಕೂ ಅಧಿಕ ಸೇವಾ ಕಾರ್ಯವನ್ನ ಮಾಡಿ ಜನರ ಕಷ್ಟಗಳಿಗೆ ಸ್ಪಂದನೆ ನೀಡುತ್ತಾ ಬಂದಿದೆ. ಕಷ್ಟ ಅಂತ ಬಂದವರಿಗೆ ಸೇವಾ ಮನೋಭಾವದಿಂದ ಕೈಲಾದಷ್ಟು ಸಹಾಯಹಸ್ತವನ್ನು ಚಾಚುತ್ತಲೇ ಬಂದಿದೆ. ಇದೀಗ ಭಗತ್ ಸೇನೆ (ರಿ.) ಮೂಡುಬಿದಿರೆ ಮುಂದಿನ ದಿನಗಳಲ್ಲಿ ಭಗತ್ ಸಿಂಗ್ ಸೇವಾ ಟ್ರಸ್ಟ್ ಅನ್ನೋ ಹೆಸರಿನಲ್ಲಿ ಅದೇ ಹುರುಪಿನೊಂದಿಗೆ ಸೇವೆಯನ್ನ ಸಲ್ಲಿಸಲಿದೆ. ಈ ಸೇವಾ ಟ್ರಸ್ಟ್ ಇನ್ನುಷ್ಟು ಹೊಸ ಹೊಸ ಕಾರ್ಯ ಯೋಜನೆಗಳನ್ನ ನಿರಂತರವಾಗಿ ಸಮಾಜಕ್ಕೆ ಅರ್ಪಿಸಲಿದೆ.

ಸೇವಾ ಟ್ರಸ್ಟ್​ನ ಸೇವಾ ಕಾರ್ಯಗಳು ಸರಾಗವಾಗಿ ನಡೆಯಲು ಇಂದು ಸ್ಥಾಪಕ ಅಧ್ಯಕ್ಷ ಸುಜಿತ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ : ಪ್ರಸಾದ್ ಆಳ್ವಾ, ಉಪಾಧ್ಯಕ್ಷ : ಶಶಿಧರ್ ಶೆಟ್ಟಿ, ಕೋಶಾಧಿಕಾರಿ : ಯೋಗೀಶ್ ಎಂ,
ಕಾರ್ಯದರ್ಶಿ: ನಿಖಿಲ್ ಕುಮಾರ್ ಭಂಡಾರಿ, ಜೊತೆ ಕಾರ್ಯದರ್ಶಿ : ದಯಾನಂದ ಆಚಾರ್ಯ ಹಾಗೂ ರಂಜಿತಾ ಶೆಟ್ಟಿ, ಮಾಧ್ಯಮ ಸಲಹೆಗಾರರು : ಮಾಣಿಕ್ಯ ಎಂ, ಕ್ರೀಡಾ ಕಾರ್ಯದರ್ಶಿ :ಸುಧೀರ್ ಕುಮಾರ್ ಶೆಟ್ಟಿ, ಕ್ರೀಡಾ ಜೊತೆ ಕಾರ್ಯದರ್ಶಿ : ಅಭಿಷೇಕ್ ಜೆ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ : ಲಿಖಿತ್ ಶೆಟ್ಟಿ, ಸಾಂಸ್ಕೃತಿಕ ಜೊತೆಕಾರ್ಯದರ್ಶಿ : ವಿಂಸ್ಟನ್ ಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ.

By Suddi9

Leave a Reply

Your email address will not be published. Required fields are marked *