ಬಂಟ್ವಾಳ: ಹರೇಕಳ, ನ್ಯೂಪಡ್ಪು ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಬಾಲಕರ ೧೪ರ ವಯೋಮಾನದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಎಸ್.ವಿ.ಎಸ್‌ ಇಂಗ್ಲಿಷ್ ಸ್ಕೂಲ್ ವಿದ್ಯಾಗಿರಿ, ಬಂಟ್ವಾಳದ ೮ನೇ ತರಗತಿ ವಿದ್ಯಾರ್ಥಿ ನಿವೇದ್‌ ಆರ್. ಸಾಲ್ಯಾನ್ ಮತ್ತು ೭ನೇ ತರಗತಿ ವಿದ್ಯಾರ್ಥಿತನ್ಮಯ್‌ ಗಟ್ಟಿ ದ್ವಿತೀಯ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರನ್ನುಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಉಪಾಧ್ಯಕ್ಷೆ ವತ್ಸಲಾ ಕಾಮತ್, ಕರ‍್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ, ಅನಿರುದ್ಧ ಕಾಮತ್, ಎಸ್.ವಿ.ಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ, ಮುಖ್ಯೋಪಾಧ್ಯಾಯರು, ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

By Suddi9

Leave a Reply

Your email address will not be published. Required fields are marked *