ಪೊಳಲಿ: ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ದ.ಕ. ಜಿಲ್ಲೆ ಮತ್ತು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬಂಟ್ವಾಳ ವಲಯ ವತಿಯಿಂದ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿಯಲ್ಲಿ ಸೆ. ೪ಕ್ಕೆ ಶ್ರೀ ಗುರುದೇವತಾ ಭಜನಾ ಮಂಜರಿ ಕಾರ್ಯಕ್ರಮ ನಡೆಯಲಿದೆ.

ಸರ್ವಮಂಗಳ ಸಭಾ ಭವನ ಪೊಳಲಿಯಲ್ಲಿ ಒಂದು ದಿನದ ಭಜನಾ ತರಬೇತಿ ಶಿಬಿರವನ್ನು ಬೆಳಿಗ್ಗೆ ೯ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಲಿದ್ದಾರೆ.

ರಾಮಕೃಷ್ಣ ಕಾಟುಕುಕ್ಕೆ, ಸುಬ್ಬ ರಾವ್ ಪೊಳಲಿ ತರಬೇತಿ ನೀಡಲಿದ್ದಾರೆ. ಕಾಸರಗೋಡು , ಮಂಗಳೂರು, ಬಂಟ್ವಾಳ, ಪುತ್ತೂರು ತಾಲೂಕುಗಳ ಭಜನಾ ಮಂಡಳಿಗೆ ಮುಕ್ತ ಆಹ್ವಾನ ನೀಡಲಾಗಿದೆ ಎಂದು ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ಅನಾರು ಕೃಷ್ಣ ಶರ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *