ಕೈಕಂಬ: ಶ್ರೀ ಕ್ಷೇತ್ರ ಪೆರಾರ ಬ್ರಹ್ಮದೇವರು, ಇಷ್ಟದೇವತಾ ಬಲವಾಂಡಿ ವ್ಯಾಘ್ರ ಚಾಮುಂಡಿ ದೈವಸ್ಥಾನ ನೂತನ ಬಂಟಕಂಬ ರಾಜಾಂಗಣಕ್ಕೆ ಜೂ.13ರಂದು ಸೋಮವಾರ ಪಾದುಕಾನ್ಯಾಸ ನೆರವೇರಿತು.

ಈಸಂದರ್ಭದಲ್ಲಿ ಉತ್ತರ ವಿಧಾನ ಸಭಾ ಶಾಸಕ ಡಾ.ವೈ ಭರತ್ ಶೆಟ್ಟಿ, ಮುಲ್ಕಿ ಶಾಸಕ ಉಮಾನಾಥ ಕೋಟ್ಯಾನ್, ಕದ್ರಿ ಜೋಗಿಮಠ ಶ್ರೀ ಶ್ರೀ ರಾಜಯೋಗಿ ನಿರ್ಮಲನಾಥ್ ಜೀ ಮಹಾರಾಜ್, ಪವಿತ್ರಪಾಣಿ ನರಸಿಂಹ ಪೆಜತ್ತಾಯ, ಪೆರಾರ ಪೆರ್ಗಡೆ ಮುಂಡಬೆಟ್ಟು ಗುತ್ತು ಗಂಗಾಧರ ರೈ, ಮಧ್ಯಸ್ಥರು ಬ್ರಾಣಬೆಟ್ಟುಗುತ್ತು ಪ್ರತಾಪ್ ಚಂದ್ರಶೆಟ್ಟಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಶಿವಾಜಿ ಶೆಟ್ಟಿ ಕೊಳಕೆಬೈಲು, ಆಡಳಿತಾಧಿಕಾರಿ ಸಾಯೀಶ ಚೌಟ, ಗ್ರಾ.ಪಂ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ, ದೇವಿ ಆರ್ ಶೆಟ್ಟಿ, ನಳಿನ್ ಕುಮಾರ್ ಮುಂಟಬೆಟ್ಟುಗುತ್ತು, ಜಿ.ಪಂ.ಮಾಜಿ ಸದಸ್ಯ ಕ್ರಷ್ಣ ಅಮೀನ್, ಜಿ.ಪಂ. ಮಾಜಿ ಸದಸ್ಯ ವಿನೋದ್ ಮಾಡ, ಜೀರ್ಣೋದ್ಧಾರ ಸಮಿತಿ ಸರ್ವಸದಸ್ಯರು ಮತ್ತು 16ಗುತ್ತು ಮನೆತನದವರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸುರೇಶ್ ಅಂಚನ್ ಸ್ವಾಗತಿಸಿ ವಂದಿಸಿದರು.

