ಬಂಟ್ವಾಳ : ಬಿ.ಸಿ.ರೋಡು ಸವಿತಾ ಸೌಹಾರ್ದ ಸಹಕಾರಿಯು ೨೦೨೦-೨೧ನೇ ಸಾಲಿನಲ್ಲಿ ಒಟ್ಟು ೧೮.೪೨ ಕೋ.ರೂ.ವ್ಯವಹಾರ ಮಾಡಿ ೧೪.೩೩ ಲಕ್ಷ ರೂ. ಲಾಭ ಗಳಿಸಿದೆ. ವರದಿ ಸಾಲಿನಲ್ಲಿ ಸದಸ್ಯರಿಗೆ ೧೩ ಶೇ. ಡಿವಿಡೆಂಡ್ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಸಹಕಾರಿಯ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಂಟ್ವಾಳ ಹೇಳಿದರು.WhatsApp Image 2021-12-22 at 4.49.30 PM (1)

ಅವರು ಮಂಗಳವಾರ ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಸಹಕಾರಿಯ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘವು ಮುಂದಿನ ವರ್ಷ ಹತ್ತು ವರ್ಷಗಳನ್ನು ಪೂರೈಸುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಶಾಖೆ ಹಾಗೂ ಸೆಲೂನ್ ಸಾಮಾಗ್ರಿಗಳ ಮಳಿಗೆ ತೆರೆಯುವ ಯೋಚನೆ ಇದೆ ಎಂದರು.WhatsApp Image 2021-12-22 at 4.49.30 PM

ಸಂಘದ ಗೌರವ ಸಲಹೆಗಾರ ಉಗ್ಗಪ್ಪ ಶೆಟ್ಟಿ ಮಾತನಾಡಿ, ಬೆಳವಣಿಗೆ ನಿರಂತರವಾಗಿರುವುದು ಅತಿ ಅಗತ್ಯವಾಗಿದ್ದು, ಎಲ್ಲರನ್ನೂ ತಲುಪುವ ಪ್ರಯತ್ನ ಮಾಡಬೇಕು. ಲಾಭಾಂಶವನ್ನು ಕಾಯ್ದುಕೊಳ್ಳುವ ಮೂಲಕ ಆಡಳಿತ ಮಂಡಳಿ ಉತ್ತಮ ಸಾಧನೆ ಮಾಡಿದೆ ಎಂದರು. ದ.ಕ.ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಮಾತನಾಡಿ, ಸಹಕಾರಿಯ ಮಾರಾಟ ಮಳಿಗೆಗೆ ವೃತ್ತಿ ಬಾಂಧವರು ಸಹಕಾರ ನೀಡಿದಾಗ ಸಮಾಜದ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು.

ಉಪಾಧ್ಯಕ್ಷ ಸುರೇಶ್ ನಂದೊಟ್ಟು ಅವರು, ಸಹಕಾರಿ ಹೊಸ ಶಾಖೆ ತೆರೆಯುವುದು ಹಾಗೂ ಸೆಲೂನ್ ಸಾಮಾಗ್ರಿಗಳ ಮಾರಾಟ ಮಳಿಗೆಯ ತೆರೆಯುವ ಯೋಜನೆಗಳ ಕುರಿತು ತಿಳಿಸಿದರು. ಮುಖ್ಯಕಾರ್ಯನಿರ್ವಹಣಾಽಕಾರಿ ಕಿಶನ್ ಎಸ್. ಅವರು ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.

ನಿರ್ದೇಶಕರಾದ ದಿನೇಶ್ ಎಲ್.ಬಂಗೇರ ಬೈಕಂಪಾಡಿ, ರವೀಂದ್ರ ಭಂಡಾರಿ ಕೃಷ್ಣಾಪುರ, ಮೋಹನ್ ಭಂಡಾರಿ ಪೊಯಿತಾಜೆ, ಸುರೇಂದ್ರ ಭಂಡಾರಿ ಪುತ್ತೂರು, ಭುಜಂಗ ಸಾಲಿಯಾನ್ ಬಿ.ಸಿ.ರೋಡು, ಪದ್ಮನಾಭ ಭಂಡಾರಿ ಸುಳ್ಯ, ಎಸ್.ರವಿ ಮಡಂತ್ಯಾರು, ಆಶಾ ಕಂದಾವರ ಉಪಸ್ಥಿತರಿದ್ದರು.
ಸಭೆಯಲ್ಲಿ ಇಬ್ಬರಿಗೆ ಸವಿತಾ ಆರೋಗ್ಯ ನಿಧಿ ವಿತರಿಸಲಾಯಿತು. ನಿರ್ದೇಶಕ ವಸಂತ ಎಂ.ಬೆಳ್ಳೂರು ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *