ಶ್ರವಣ ಬೆಳಗೊಳ: ೧೨ ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನವು ಶ್ರವಣಬೆಳಗೊಳ ಶ್ರೀ ಜೈನಮಠದ ಸಹಯೋಗದೊಂದಿಗೆ ಶನಿವಾರ ಸಂಜೆ ನಡೆಯಲಿದ್ದು ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಉದ್ಘಾಟಿಸುವರು. ಕನ್ನಡದ ಹಿರಿಯ ಸಾಹಿತಿ ಜೈನ ಸಾಹಿತ್ತಯ ಚರಿತ್ರೆಯ ಮಹಾ ಸಂಪುಟಗಳ ಸಂಪಾದಕರಾದ ಡಾ.ಎಸ್.ಪಿ. ಪದ್ಮಪ್ರಸಾದ್ ಅವರು ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದಾರೆ.
ಆಹ್ವಾನಿತರಿಗೆ ಮಾತ್ರ ಪ್ರವೇಶವಿರುವ ಕಾರ್ಯಕ್ರಮ ಆಸಕ್ತರಿಗಾಗಿ ಪೇಸ್‌ಬೂಕ್‌ನಲ್ಲಿ ಪ್ರಸಾರವಿರಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ. ಗೊಮ್ಮಟ ವಾಣಿಯ ಸಂಪದಕ ಅಶೋಕ್ ಕುಮಾರ್ ಅವರು ನಮ್ಮೂರು ನಮ್ಮ ಹೆಮ್ಮೆ ಶ್ರವಣಬೆಳಗೊಳ ಕುರಿತು ಮಾತನಾಡುವರು.
ಕವಿಗೋಷ್ಠಿ, ಅನುಭಾವ ಗೋಷ್ಠಿ, ಉದ್ಘಾಟನೆ, ಗೌರವ ಪ್ರಧಾನ ಸಮಾರಂಭವಿದೆ. ೧೭ ಜನ ಹಿರಿಯ ಸಾಧಕರನ್ನು , ೮ ಸಂಸ್ಥೆಗಳನ್ನು ಗೌವಿಸಲಾಗುತ್ತದೆ. ಯುವಕರ ಸಾದನೆಗೆ ಗೌರವವಿದೆ. ಮಠದ ಅಧಿಕಾರಿಗಳ ಸೂಚನೆಯಂತೆ ಮಕ್ಕಳ ಪ್ರತಿಭೊತ್ಸವ ಮತ್ತು ಗೌರವಾರ್ಪಣೆಯನ್ನು ಮುಂದೂಡಲಾಗಿದೆ.
ಹಿರಿಯ ಸಾಧಕರಾದ *ಡಾ. ಪ್ರದೀಪ್ ಕುಮಾರ್ ಹೆಬ್ರಿ- ಎಚ್. ಸುಧಾಕರ ಹೆಗ್ಡೆ-ಉಡುಪಿ, ಮದನ್ ಗೌಡ-ಹಾಸನ ತಾಳ್ತಜೆ ವಸಂತ ಕುಮಾರ್, ಡಾ. ಜಗನ್ನಾಥ ಎಸ್. ಶೆಟ್ಟಿ ದ.ಕ, ಎಂ. ಆರ್. ವಾಸುದೇವ್ ಮಂಗಳೂರು, ಡಾ.ಎಚ್.ಪಿ ಮೋಹನ್ ಕುಮಾರ್ ಶಾಸ್ತ್ರಿ, ,ಡಾ. ಎಸ್. ಶ್ರೀನಿವಾಸ ಶೆಟ್ಟಿ, ಉಡುಪಿ, ಡಾ. ಮಂಜುನಾಥ ಎಸ್. ರೇವಣ್‌ಕರ್, ಪ್ರಭಾಕರ ಕಲ್ಯಾಣಿ ಪೆರ್ಡೂರು ಕರ್ನಾಟಕ ರಂಗಭೂಮಿ ರತ್ನ , ಅನಂತ್ರಾಜ ಗೊರೂರು- ಹಾಸನ, , ಎಂ.ಕೆ ಗರ್ಡಾಡಿ ಮೂಡುಬಿದಿರೆ, ಹೊಸಹಳ್ಳಿ ದಾಳೆಗೌಡ , ಎಂ.ಎಸ್. ಶಿವಪ್ರಕಾಶ್ ಮಂಡ್ಯ, ಸುರೇಂದ್ರ ಪಣಿಯೂರು, ಗಂಗಾಧರ ಕಿದಿಯೂರು, ಉಡುಪಿ, ಎಂ.ಶಾಂತಾರಾಮ ಕುಡ್ವ, ಯು.ಟಿ. ಖಾದರ್, ಮಂಗಳೂರು ಕರ್ನಾಟಕ ಸಾಧನಾ ರತ್ನ ಗೌರವ ನೀಡಲಾಗಿತ್ತಿದೆ. ಕರ್ನಾಟಕ ಸಂಘ ಸಿರಿ ಗೌರವಕ್ಕೆ ವಿಶ್ವಮಟ್ಟದ ಮಾಧ್ಯಮ ಸಂಸ್ಥೆ ದೈಜಿವರ್ಲ್ಡ್ ಮೀಡಿಯಾ, ೬೦ ಸಂಭ್ರಮದ ಪ್ರತಿನಿಧಿ ದೈನಿಕ ಮತ್ತು ಜನಮಿತ್ರ ಪತ್ರಿಕೆ ಸಹಿತ ೮ ಸಂಸ್ಥೆಗಳಿಗೆ ಗೌರವವಿದೆ.
ಸುಹಾಸಂ ಉಡುಪಿ, ಶಾಂತಿ ನಿಕೇತನ ಯುವೃಂದ ಕುಚ್ಚೂರು ಹೆಬ್ರಿ, ಮಮತೆಯ ಮಡಿಲು ಮಂಡ್ಯ, ಸ್ವಪ್ನ ಬುಕ್ ಹೌಸ್, ಸವನ್ನಾ ಎಂಟರ್‌ಪ್ರೈಸಸ್ ಈ ಗೌರವಕ್ಕೆ ಪಾತ್ರವಾಗಲಿರುವರು.ಕವಿಗೋಷ್ಠಿಗೆ ೭೬ ಯಕ್ಷಗಾನ ಪ್ರಸಂಗಗಳ ಕರ್ತೃ ದೇವದಾಸ ಈಶ್ವರಮಂಗಲ ಅವರು ಅಧ್ಯಕ್ಷತೆ ವಹಿಸುವರು.
