ಬಂಟ್ವಾಳ: ಪಂಜಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಬೂತ್ ಅಧ್ಯಕ್ಷರ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಬುಧವಾರ ಭೇಟಿ ನೀಡಿ ಅಭಿನಂದಿಸಿದರು.
18btl-Raiಬಿಜೆಪಿಯವರ ಸುಳ್ಳು ಆರೋಪ ಮತ್ತು ಅಪಪ್ರಚಾರ ಎದರಿಸಲು ಕಾಂಗ್ರೆಸ್ ಸನ್ನದ್ಧರಾಗಿದ್ದು, ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಜನತೆಗೆ ತಿಳಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.ಪಂಜಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಬೂತ್ ಅಧ್ಯಕ್ಷರ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಬುಧವಾರ ಭೇಟಿ ನೀಡಿ ತೆಂಗಿನ ಸಸಿ ವಿತರಿಸಿ ಅವರು ಮಾತನಾಡಿ ಅಭಿನಂದಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ , ವಲಯಾಧ್ಯಕ್ಷ ದೇವಪ್ಪ ಕುಲಾಲ್, ಬೂತ್ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕುಲಾಲ್, ರವಿ ಪೂಜಾರಿ, ರೋಬಿನ್, ಜಿಲ್ಲಾ ಸಹಕಾರಿ ಸಂಘದ ಅಧ್ಯಕ್ಷ ಸುದರ್ಶನ್ ಜೈನ್, ಹಿಂದುಳಿದ ವರ್ಗ ಅಧ್ಯಕ್ಷ ಕುಕ್ಕಿಪಾಡಿ ತಿಮ್ಮಪ್ಪ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಜೋರಾ, ಪ್ರಮುಖರಾದ ಪದ್ಮಾವತಿ ವಿ. ಪೂಜಾರಿ, ಮಾಲತಿ ಪೂಜಾರಿ, ಜಗದೀಶ್ ಕೊಯಿಲ, ವಿಶ್ವನಾಥ ಶೆಟ್ಟಿ, ದೇಜಪ್ಪ ಪೂಜಾರಿ, ದಿನೇಶ್ ಶೆಟ್ಟಿ, ಮೆಲ್ವಿನ್ ಲೋಬೋ, ಕೇಶವ ಪೂಜಾರಿ, ವಾಲ್ಟರ್ ನೋರೊನ್ಹ, ವಸಂತಿ, ಪ್ರಕಾಶ್ ಕುಮಾರ್ ಜೈನ್ ಪೀರ್ದಬೆಟ್ಟು, ನೋಣಯ್ಯ , ನೇಮಿರಾಜ್ ಕಡಂಬ, ಐತಪ್ಪ ಆಳ್ವ, ಮೋಹನ್ ಪೂಜಾರಿ, ಪ್ರವೀಣ್, ಚೇತನ್ ಬುಡೋಳಿ, ಕೊನ್ಸೆಪ್ಟ್ ಡೇಸಾ, ರಾಜೇಶ್ ಶೆಟ್ಟಿ ಬುಡೋಳಿ ಇದ್ದರು.

By Suddi9

Leave a Reply

Your email address will not be published. Required fields are marked *