ಬಂಟ್ವಾಳ:  ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಬಂಟ್ವಾಳ ತಾಲೂಕು ಇದರ ನೇತೃತ್ವದಲ್ಲಿ ದೆಹಲಿಯಲ್ಲಿ ಇತ್ತೀಚೆಗೆ ಸಿವಿಲ್ ಡಿಫೆನ್ಸ್ ಮಹಿಳಾ ಆಧಿಕಾರಿಯೊಬ್ಬರನ್ನು ಅತ್ಯಾಚಾರಗೈದು ಅಮಾನುಷವಾಗಿ ಕೊಲೆಗೈದ ಪಾತಕಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಬಿಸಿರೋಡಿನ ಮೇಲು ಸೇತುವೆ ಕೆಳಗೆ ಪ್ರತಿಭಟನೆ ನಡೆಯಿತು.Protest Sananaಪ್ರತಿಭಟನೆಯನ್ನುದ್ದೇಶಿಸಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ವಿಭಾಗೀಯ ಸಂಚಾಲಕರಾದ ಶ್ರೀ ಸತೀಶ್ ಕುಮಾರ್ ಮಾತನಾಡಿ ಇತ್ತೀಚೆಗೆ ದೇಶದ ವಿವಿದೆಡೆ ನಡೆದಿರುವ ಹಲವಾರು ಅತ್ಯಾಚಾರಗಳನ್ನು ಅವಲೋಕಿಸಿದಾಗ ಉನ್ನಾವ್, ಹತ್ರಾಸ್ ನ್ನು ಅತ್ಯಂತ ರಾಕ್ಷಸೀಯ ಕೃತ್ಯ ಎಂದು ವರ್ಣಿಸಲಾಗಿತ್ತು. ಅದಕ್ಕಿಂತ ಕ್ರೂರವಾಗಿ ದೆಹಲಿಯ ರಬಿಯಾ ಎಂಬ ಹೆಣ್ಣು ಮಗಳ ಅತ್ಯಾಚಾರ ಪೈಶಾಚಿಕ ಎನ್ನುವಂತಾಗಿದೆ. ಅಲ್ಪ ಸಂಖ್ಯಾತಳು ಎಂಬ ಕಾರಣಕ್ಕೆ ಈ ಘಟನೆಯನ್ನು ವ್ಯವಸ್ಥಿತವಾಗಿ ಪ್ರಭುತ್ವವೇ ಮುಚ್ಚಿ ಹಾಕುವ ಆತಂಕ ಎದುರಾಗಿದೆ. ಅತ್ಯಂತ ಭೀಭತ್ಸವಾಗಿ ನಡೆದಿರುವ ಈ ಅತ್ಯಾಚಾರ ಕೊಲೆಯನ್ನು ಮುಚ್ಚಿ ಹಾಕಲು ಮರಣೋತ್ತರ ಪರೀಕ್ಷೆಯಲ್ಲಿ ನೈಜ ವಿವರವನ್ನು ನಮೂದಿಸದಿರುವುದು ಮತ್ತು ಪೋಲೀಸರು ದೂರು ದಾಖಲಿಸಲು ವಿಳಂಬ ಮಾಡಿರೋದು ದುರಂತ ಎಂದರು.

ಕೇಂದ್ರ ಸರಕಾರದ ರಾಷ್ಟ್ರೀಯ ಮಹಿಳಾ ಆಯೋಗದ ಪ್ರಕಾರವೇ ಕಳೆದ ಎರಡು ತಿಂಗಳಲ್ಲಿ ದೇಶದಲ್ಲಿ ೧೯ ಸಾವಿರ ಅತ್ಯಾಚಾರ ಪ್ರಕರಣಗಳು ನಡೆದಿವೆ. ಇವುಗಳಲ್ಲಿ ೧೦೬೦೦ ಪ್ರಕರಣಗಳು ಸನ್ಯಾಸಿ ಆಳ್ವಿಕೆಯಲ್ಲಿರುವ ಉತ್ತರ ಪ್ರದೇಶದಲ್ಲಿ ನಡೆದಿದೆ. ಎರಡುವರೆ ಸಾವಿರ ಪ್ರಕರಣಗಳು ದೆಹಲಿಯಲ್ಲಿ ನಡೆದಿದೆ. ಕಳೆದ ದಶಕದಿಂದ ಈವರೆಗೆ ದೆಹಲಿ ಅತ್ಯಾಚಾರದ ರಾಜಧಾನಿ ಎಂದೇ ಖ್ಯಾತವಾಗಿದೆ. ಈ ಪ್ರಕರಣವನ್ನು ಈವರೆಗೆ ಗಂಭೀರವಾಗಿ ಪರಿಗಣಿಸದಿರುವುದು ಖೇದಕರ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ಇಂತಹ ಪ್ರಕರಣಗಳು ಭವಿಷ್ಯದಲ್ಲಿ ದೊಡ್ಡ ಆತಂಕನ್ನೇ ಸೃಷ್ಟಿಸಿದೆ.

ಪ್ರತಿಭಟನೆಯನ್ನುದ್ದೇಶಿಸಿ ಜೆಡಿಎಸ್ ನ ರಾಜ್ಯ ಮುಖಂಡರಾದ ಮೊಹಮ್ಮದ್ ಶಾಫಿ, ಸಂಘಟನೆಯ ಪ್ರಧಾನ ಕಾರ‍್ಯದರ್ಶಿ ಬಿ.ಶೇಖರ್, ಬೂಡಾದ ಮಾಜೀ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿದರು. ನೇತೃತ್ವವನ್ನು ಸಂಘಟನೆಯ ಗೌರವ ಸಲಹೆಗಾರರಾದ ಬಿ.ಎಂ ಪ್ರಭಾಕರ ದೈವಗುಡ್ಡೆ, ಅಧ್ಯಕ್ಷ ಶ್ರೀ ಪ್ರಕಾಶ್ ಬಿ. ಶೆಟ್ಟಿ ಶ್ರೀ ಶೈಲ ತುಂಬೆ, ಶ್ರೀ ರಾಜಾ ಚಂಡ್ತಿಮಾರ್, ಶ್ರೀ.ಜಗನ್ನಾಥ್ ಬಂಟ್ವಾಳ, ಶ್ರೀ ಸಯ್ಯದ್ ಅಬ್ದುಲ್ ಕರೀಂ, ಶ್ರೀ ರಿರ‍್ಡ್ ಶಂಭೂರು, ಮ್ಯಾಕ್ಸಿಮ್ ಹಾಗೂ ಬದ್ರುದ್ದೀನ್ ನಾವೂರು. ಕಾನೂನು ಸಲಹೆಗಾರ ನ್ಯಾಯವಾದಿ ಶ್ರೀ ಚಂದ್ರ ಶೇಖರ ಪೂಜಾರಿ, ಸುರೇಂದ್ರ ಕೋಟ್ಯಾನ್, ಕಾಂಗ್ರೆಸ್ ಮುಖಂಡ ಬೇಬಿ ಕುಂದರ್, ಪುರಸಭಾ ಸದಸ್ಯ ಲೋಲಾಕ್ಷ, ಸೀತರಾಮ ಶೆಟ್ಟಿ, ವಹಿಸಿದ್ದರು.ಪ್ರಾರಂಭದಲ್ಲಿ ಸಂಘಟನೆಯ ಸಹಕರ‍್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *