ಬಂಟ್ವಾಳ: ಸೋರ್ಣಾಡು ಸಮೀಪ ಅರಳ ಗ್ರಾಮದ ಅರ್ಬಿ ಎಂಬಲ್ಲಿ ಮಂಗಳೂರು_ಬೆಂಗಳೂರು ನಡುವಿನ ಡಿಸೇಲ್ ಪೂರೈಸುವ ಪೈಪ್ ಲೈನ್ ಗೆ ಕನ್ನ ಕೊರೆದು ಸುಮಾರು ರೂ ೪೦ಲಕ್ಷ ಮೌಲ್ಯದ ಡಿಸೇಲ್ ಕಳವು ಮತ್ತು ಮಾರಾಟ ಮಾಡುತ್ತಿದ್ದ ದಂಧೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಮುಖ ಆರೋಪಿ ಐವನ್ ಪಿಂಟೋ ಸಹಿತ ಮೂವರನ್ನು ಮಂಗಳವಾರ ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ೬ ಕ್ಕೂ ಮಿಕ್ಕಿ ಮಂದಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.11btl-Ivan Pintoವೆಲ್ಡರ್ ವೃತ್ತಿಯ ಪಚ್ಚನಾಡಿ ಬೋಂದೆಲ್ ನಿವಾಸಿ ಅಜಿತ್ ಮತ್ತು ಕಣ್ಣೂರು ನಿವಾಸಿ ಜೋಯೆಲ್ ಪ್ರೀತಂ ಡಿಸೋಜ ಇವರನ್ನು ಬಂಧಿಸಲಾಗಿದ್ದು, ಇತರರು ತಲೆ ಮರೆಸಿಕೊಂಡಿದ್ದಾರೆ. ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಎಸೈ ಪ್ರಸನ್ನ ಎಂ. ನೇತೃತ್ವದ ಪೊಲೀಸರು ಜೀಪ್ ಸಹಿತ ಡಿಸೇಲ್ ತುಂಬಿದ ಕ್ಯಾನ್ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಕಳೆದ ೨೦೦೯ರಲ್ಲಿ ಇಲ್ಲಿಗೆ ಸಮೀಪದ ಪಂಜಿಕಲ್ಲು ಪದವು ಅರಣ್ಯ ಇಲಾಖೆ ಜಮೀನಿನ ಬಳಿ ನಡೆಯುತ್ತಿದ್ದ ಕೆಂಪು ಕಲ್ಲಿನ ಕ್ವಾರೆ ಬಳಿ ಡಿಸೇಲ್ ಕಳವು ದಂಧೆ ಪತ್ತೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

By Suddi9

Leave a Reply

Your email address will not be published. Required fields are marked *