ಬಂಟ್ವಾಳ:  ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯ ಅವರ ಷಷ್ಠ ಬ್ದ ಪ್ರಯುಕ್ತ ಮಣಿನಾಲ್ಕೂರು ಸೇವಾ ಸಹಕಾರಿ ಸಂಘ ಸರಪಾಡಿ ಮತ್ತು ಕರ್ನಾಟಕ ತೆಂಗು ಉತ್ಪಾದಕರ ಸಹಕಾರಿ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಸಂಘದ ಸರಪಾಡಿ ದಿ.ಎನ್. ಸುಬ್ಬಣ್ಣ ಶೆಟ್ಟಿ ಸಭಾಂಗಣದಲ್ಲಿ  ಸಮಗ್ರ ಸುಸ್ಥಿರ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ ಮಂಗಳವಾರ ನಡೆಯಿತು.2303pkt2

ಮಣಿನಾಲ್ಕೂರು ಸೇವಾ ಸಹಕಾರಿ ಸಂಘ ಸರಪಾಡಿ ಇದರ ಅಧ್ಯಕ್ಷ ಕೆ.ರಾಧಾಕೃಷ್ಣ ಮಯ್ಯ ಅವರು ಉದ್ಘಾಟಿಸಿ ಮಾತನಾಡಿ, ಭೂಮಿಯ ಫಲವತ್ತತೆ ಕಾಯ್ದುಕೊಳ್ಳಲು ಸಾವಯವ ಕೃಷಿಗೆ ಮಹತ್ವ ನೀಡಬೇಕು, ಮುಂದಿನ ಪೀಳಿಗೆಗೆ ಫಲವಂತಿಕೆಯ ಭೂಮಿಯನ್ನು  ಉಳಿಸಿಕೊಳ್ಳಲು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಬೇಕು ಎಂದು ಹೇಳಿದರು.

ಕರ್ನಾಟಕ ತೆಂಗು ಉತ್ಪಾದಕರ ಸಹಕಾರಿ ಬಂಟ್ವಾಳ ಇದರ ಅಧ್ಯಕ್ಷ ರಾಜಾ ಬಂಟ್ವಾಳ ಅವರು ಮಾತನಾಡಿ, ಸಾವಯವ ಕೃಷಿ ಬಗ್ಗೆ ಜಿಲ್ಲೆಯಾದ್ಯಂತ ಮಾಹಿತಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆಸಕ್ತ ಕೃಷಿಕರಿಗೆ  ಉತ್ತಮ ಕುಬ್ಜ  ತಳಿಯ ತೆಂಗು ಗಿಡವನ್ನು ವಿತರಿಸಿ ಒಂದು ವರ್ಷದಲ್ಲಿ ಉತ್ತಮ ಬೆಳವಣಿಗೆ ಪ್ರದರ್ಶಿಸಿದವರಿಗೆ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಸರಪಾಡಿ ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ  ಸರಪಾಡಿ ಅಶೋಕ ಶೆಟ್ಟಿ ಅವರು ಮಾತನಾಡಿ, ತಮ್ಮ ಬದುಕನ್ನು ಸಮಾಜಕ್ಕೆ ಅರ್ಪಣೆ ಮಾಡಿದ ಸ್ವಾಮೀಜಿ ಅವರ ಷಷ್ಠ ಬ್ದ ವನ್ನು ಜನಪರ ಕಾರ್ಯಕ್ರಮವಾಗಿ ಸಮಾಜಕ್ಕೆ ಕೊಡುಗೆಯಾಗಿಸುವ ಸದುದ್ದೇಶದಿಂದ ಹಮ್ಮಿಕೊಂಡ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ಪರಂಪರೆಯ ಸಾವಯವ ಕೃಷಿ ದೇಶದ ಮಣ್ಣಿಗೆ ಭೂಷಣಪ್ರಾಯವಾಗಿದೆ ಎಂದರು.

ಷಷ್ಠ ಬ್ದ ಸಂಭ್ರಮ ಸಮಿತಿ ಕೋಶಾಽಕಾರಿ ಎ.ಸುರೇಶ ರೈ, ಬಂಟ್ವಾಳ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಕೃಷಿ ವಿಜ್ಞಾನಿ ಡಾ.ವಿಕ್ರಂ, ಪ್ರಗತಿಪರ ಕೃಷಿಕ ಗಂಗಾಧರ್ ಅಂಚನ್, ಸಹಕಾರಿ ಸಂಘದ ಉಪಾಧ್ಯಕ್ಷ ವಿಶ್ವನಾಥ ನಾಯಕ್, ಮುಖ್ಯಕಾರ್ಯನಿರ್ವಹಣಾಽಕಾರಿ ಎಚ್.ಸುಧಾಕರ ಶೆಟ್ಟಿ ಮತ್ತು ನಿರ್ದೇಶಕರು ಹಾಗೂ ಸಿಬಂದಿ ವರ್ಗ ಉಪಸ್ಥಿತರಿದ್ದರು.

ಸಾವಯವ ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲು ನಾಚೇ ಗೌಡ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಣ್ಣಿನ ಫಲವತ್ತತೆ, ತ್ಯಾಜ್ಯಗಳ ಮೌಲ್ಯವರ್ಧನೆ, ಸಮಗ್ರ ಬೆಳೆ ಪದ್ದತಿ,ಉಪಕಸುಬುಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿಕರ ಕೃಷಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.ಸಂಘದ ನಿರ್ದೇಶಕ ಎನ್.ಧನಂಜಯ ಶೆಟ್ಟಿ ಅವರು ಸ್ವಾಗತಿಸಿದರು. ತೆಂಗು ಉತ್ಪಾದಕರ ಸ.ಸಂಘದ ಪ್ರಬಂಧಕ ಹರ್ಷಿತ್ ವಂದಿಸಿದರು. ಷಷ್ಠ ಬ್ದ ಸಂಭ್ರಮ ಸಮಿತಿಯ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *