ಮುಂಬಯಿ: ಮಾ.೧೬: ಉಡುಪಿ ಜಿಲ್ಲೆಯ ಕಲ್ಯಾಣ್ಫುರ ಮೂಡುತೋನ್ಸೆ ಇಲ್ಲಿನ ಬ್ರಹ್ಮಶ್ರೀ ಬೈದರ್ಕಳ ಪಂಚ ಧೂಮವತೀ ಗರಡಿ ಇದರ ಸರ್ವೋನ್ನತಿಗಾಗಿ ಸೇವಾನಿರತ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ತನ್ನ ದ್ವಿತೀಯ ವಾರ್ಷಿಕ ಮಹಾಸಭೆಯನ್ನು ಕಳೆದ ಭಾನುವಾರ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ಸೇವಾ  ಟ್ರಸ್ಟ್ ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಸಿತು. Thonse Garodi AGM 1

ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷೀಯ ಭಾಷಣಗೈದು ಭವಿಷ್ಯದಲ್ಲಿ ನಮ್ಮ ಟ್ರಸ್ಟ್ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಮತ್ತು ಸದಸ್ಯರಲ್ಲಿ ಐಕ್ಯತೆಯನ್ನು ತರಲು ವಿಭಿನ್ನ ಸಾಂಸ್ಕ್ರತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸಬೇಕು. ನಾವು ಯುವಕರು ಮತ್ತು ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಸಹ ಆಯೋಜಿಸಬೇಕು. ನಮ್ಮ ಟ್ರಸ್ಟ್ ತೋನ್ಸೆ ಗೊರೊಡಿ ಕ್ರಮಬದ್ಧತೆಯ ಚಟುವಟಿಕೆಗಳಿಗೆ ಕೊಡುಗೆ ನೀಡಬೇಕು ಮತ್ತು ಅಗತ್ಯವಿರುವ ಭಕ್ತರಿಂದ ಹಣಕಾಸಿನ ಸಹಾಯಕ್ಕಾಗಿ ಮನವಿ ಮಾಡಲು ಸಹ ಪ್ರತಿಕ್ರಿಯಿಸಬೇಕು. ಟ್ರಸ್ಟ್ ನ ಆರ್ಥಿಕ ಬಲವನ್ನು ಹೆಚ್ಚಿಸಲು ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಸದಸ್ಯರಿಗೆ ಮನವಿ ಮಾಡಿದರು. ಹಿರಿಕಿರಿಯ ಸರ್ವಕಾಲೀಕ ಸಮಯೋಚಿತ ಬೆಂಬಲಕ್ಕಾಗಿ ಧನ್ಯವಾದಗಳು. ಬಹುಸಂಖ್ಯೆಯ ಸದಸ್ಯರ ಉಪಸ್ಥಿತಿಯನ್ನು ಶ್ಲಾಘಿಸಿದರು.Thonse Garodi AGM 2

ಜೊತೆ ಕಾರ್ಯದರ್ಶಿ ಕರುಣಾಕರ್ ಬಿ.ಪೂಜಾರಿ ಗತಸಾಲಿನ ಮಹಾಸಭೆಯ ವರದಿ ವಾಚಿಸಿದ್ದು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಗತ ವರ್ಷದ ಕಾರ್ಯಚಟುವಟಿಕೆಗಳ ಮಾಹಿತಿಯನ್ನಿತ್ತು ಟ್ರಸ್ಟ್ ನ ವೈದ್ಯಕೀಯ ನೆರವು ಯೋಜನೆಗೆ ಕೊಡುಗೆ ನೀಡಿದವರ, ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಇತ್ಯಾದಿ ವಿವರಗಳೊಂದಿಗೆ ವಾರ್ಷಿಕ ವರದಿ ಪ್ರಸ್ತುತಪಡಿಸಿದರು. ಗೌ| ಪ್ರ| ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್ ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಈ ತನಕ ಉಚಿತ ಸೇವೆಗಳನ್ನು ಸಲ್ಲಿಸುತ್ತಿರುವ ಎಸ್.ಎನ್ ಪೂಜಾರಿ ಎಂಡ್ ಕಂಪೆನಿ ಚಾರ್ಟರ್ಡ್ ಅಕೌಂಟೆಂಟ್ ಅವರನ್ನೇ ೨೦೨೦-೨೧ರ ಸಾಲಿಗೂ ಮತ್ತೆ ಲೆಕ್ಕ ಪರಿಶೋಧಕರನ್ನಾಗಿ ನೇಮಿಸಲಾಯಿತು.Thonse Garodi AGM 3

ಬಿ.ಇ (ಮೆಕ್ಯಾನಿಕಲ್) ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ ಸಾಹಿಲ್ ಮಹೇಶ್ ಮತ್ತು ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶ್ರೇಷ್ಠ ಅಂಗಗಳೊಂದಿಗೆ ಉತ್ತೀರ್ಣರಾದ ಸಿಯಾ ಕಿರಣಚಂದ್ರ ಪೂಜಾರಿ ಮತ್ತು ಅನುಷ್ಕಾ ಜಯ ಪೂಜಾರಿ ಇವರನ್ನು ಟ್ರಸ್ಟ್ ಪರವಾಗಿ ಸ್ಮರಣಿಕೆ ಮತ್ತು ನಗದು ಬಹುಮಾನ ಪ್ರದಾನಿಸಿ ಗೌರವಿಸಲಾಯಿತು. ವಿಶ್ವನಾಥ ತೋನ್ಸೆ ಈ ಪ್ರತಿಭಾನ್ವಿತರ ಬಗ್ಗೆ ಮಾಹಿತಿ ನೀಡಿದರು. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ನಡುವೆಯೂಡೀ ಸಭೆಗೆ ಅನೇಕ ಸದಸ್ಯರು ಹಾಜರಿರುವುದು ನಮ್ಮ ಟ್ರಸ್ಟ್ನ ಹಿರಿಮೆ. ಯಾವುದೇ ಸಂಘವು ತನ್ನ ಧ್ಯೇಯವನ್ನು ನಿರ್ವಹಿಸಲು ಬಲವಾದ ಅಡಿಪಾಯ ಅಗತ್ಯ ಮತ್ತು ಅವರ ನಿರಂತರ ಬೆಂಬಲವನ್ನು ಭರವಸೆ ನೀಡಿದೆ ಎಂದು ಉಪಾಧ್ಯಕ್ಷರಾದ ಸಿ.ಕೆ ಪೂಜಾರಿ ಮತ್ತು ಡಿ.ಬಿ ಅಮೀನ್ ಸಂತೋಷ ವ್ಯಕ್ತಪಡಿಸಿದರು.Thonse Garodi AGM 4

ಅಂತೆಯೇ ಸಭಿಕರಲ್ಲಿ ಕೃಷ್ಣ ಪಾಲನ್, ಭಾರತಿ ಎನ್.ಸುವರ್ಣ, ಲಕ್ಷ್ಮೀ ಎನ್.ಕೋಟ್ಯಾನ್, ವಿಜಯ್ ಸನಿಲ್, ಸಾಹಿಲ್ ಮಹೇಶ್ ಮತ್ತು ಅನುಷಾ ಪೂಜಾರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು, ಸಲಹಾದಾರರು, ಸದಸ್ಯರು ಹಾಜರಿದ್ದು, ಸದಸ್ಯರು ಶ್ರೀ ಬ್ರಹ್ಮ ಬೈದರ್ಕಳರಿಗೆ ಪ್ರಾರ್ಥನೆಗೈದು ಮಹಾಸಭೆಗೆ ಚಾಲನೆಯನ್ನಿತ್ತರು. ಉಪಾಧ್ಯಕ್ಷ ವಿಶ್ವನಾಥ ತೋನ್ಸೆ ಸ್ವಾಗತಿಸಿದರು.Thonse Garodi AGM 5

ಗತ ಸಾಲಿನಲ್ಲಿ ಅಗಲಿದ ಟ್ರಸ್ಟ್ ನ ಹಿತೈಷಿ ಹಾಗೂ ಕೊಡುಗೈದಾನಿಗಳಾದ ಜಯ ಸಿ.ಸುವರ್ಣ, ಎಂ.ಬಿ ಕುಕ್ಯಾನ್, ಪ್ರೊ| ಶಿವ ಬಿಲ್ಲಾವ ಮತ್ತು  ಟ್ರಸ್ಡ್ ನ ಸದಸ್ಯ ಶೇಖರ್ ಪೂಜಾರಿ ಸೇರಿದಂತೆ ಅನೇಕರಿಗೆ ಗೌರವದ ಸಂಕೇತವಾಗಿ ಆರಂಭದಲ್ಲಿ ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸಲ್ಲಿಸಲಾಯಿತು. ಭಕ್ತರು ಒದಗಿಸಿದ ಹಣಕಾಸಿನ ಸಹಾಯದ ವಿವರಗಳು ಮತ್ತು ಈ ಉದಾತ್ತತೆಗೆ, ದಾನವಿತ್ತ ವೈಯಕ್ತಿಕ ದಾನಿಗಳ ಹೆಸರುಗಳನ್ನು ಪ್ರಸ್ತುತಪಡಿಸಿದರು ಮತ್ತು ಅವರ ನಿರಂತರ ಬೆಂಬಲದ ಆಶಯ ವ್ಯಕ್ತಪಡಿಸಿ ಸಂಜೀವ ಪೂಜಾರಿ ತೋನ್ಸೆ ವಂದನಾರ್ಪಣೆ ಗೈದರು.

By Suddi9

Leave a Reply

Your email address will not be published. Required fields are marked *