ಮುಂಬಯಿ: ಮಂಗಳೂರು ಹೊರ ವಲಯದ ಬಜಾಲು, ಅಳಪೆ ಕಣ್ಣೂರುಅಡ್ಯಾರು ವಲಯ ಬಂಟರ ಸಂಘ (ರಿ.) ಸಂಸ್ಥೆಯು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಹಿರಿಯ ಸಮಾಜ
ಸೇವಕಿ, ನಾಡಿನ ಹೆಸರಾಂತ ಸ್ತ್ರೀ ಸಂಘಟಕಿ ಶ್ರೀ ಬೈದ್ಯಾವುಗುತ್ತು ಜಯಲಕ್ಷ್ಮೀ ಹೆಗ್ಗಡೆ ಅವರನ್ನು ಸಂಘದ ವತಿಯಿಂದಸನ್ಮಾನಿಸಿ ಗೌರವಿಸಿತು.
೩೭ ವರ್ಷಗಳಿಂದ ಅಭ್ಯುದಯ ಮಹಿಳಾ ಮಂಡಳದ ಅಧ್ಯಕ್ಷೆಯಾಗಿ, ಕರ್ನಾಟಕರಾಜ್ಯ ಸಮಾಜ ಕಲ್ಯಾಣಸಲಹಾ ಮಂಡಳಿ ಮಾಜಿ ನಿರ್ದೇಶಕಿ, ಬಂಟರಯಾನೆ ನಾಡವರ ಮಾತೃ ಸಂಘ ಕರ‍್ಯಕಾರಿ ಸಮಿತಿ ಸದಸ್ಯೆಜಿಲ್ಲಾ ಪಿಎನ್‌ಡಿಟಿ ಜಿಲ್ಲಾ ಸದಸ್ಯರು (ಜನನ ಅಂಗ ನಿರ್ಣಯ), ಅಡ್ಯಾರು ಶ್ರೀ ಮಹಾಲಿಂಗೇಶ್ವರಮಾರ್ಕಾಂಡೇಯ ಚಿಣ್ಣರ ಹಾಗೂ ಯುವ ಶಕ್ತಿಯ ಸಂಚಾಲಕಿ ಮತ್ತು ಜನತಾ ದಳದ ಮಾಜಿ ಜಿಲ್ಲಾಮಹಿಳಾ ಘಟಕದಧ್ಯಕ್ಷರಾಗಿ ಹತ್ತು ಹಲವು ಸಂಸ್ಥೆಗಳಲ್ಲಿ ಹಲವಾರು ವರ್ಷಗಳಲ್ಲಿ ಜಯಲಕ್ಷ್ಮೀ ಹೆಗ್ಗಡೆ ಅನುಪಮ ಸೇವೆ ಸಲ್ಲಿಸಿರುತ್ತಾರೆ.
ಈ ಸಂದರ್ಭದಲ್ಲಿ ಸಂಘದಅಧ್ಯಕ್ಷ ಬಿ.ಯಶೋಧರ ಶೆಟ್ಟಿ, ರಾಮ್ ಪ್ರಸಾದ್ ಪೂಂಜ ಜಯಶ್ರೀ ಪೂಂಜ, ಜಯರಾಮ್ ಶೆಟ್ಟಿ, ದೀಕ್ಷ ವೈ.ಶೆಟ್ಟಿ, ದಯಾನಂದ ಪಯ್ಯಾಡೆ, ಶೀಲಾ ಶೆಟ್ಟಿ ಅಡ್ಯಾರು ಮತ್ತಿತರರು ಉಪಸ್ಥಿತರಿದ್ದರು.

