ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನ ೧೫ನೇ ಹಣಕಾಸು ಯೋಜನೆಯಡಿ ಗುರುಪುರ ಬೆಳ್ಳೂರುಗುತ್ತು ಶ್ರೀ ಕೋರ‍್ದಬ್ಬು ದೈವಸ್ಥಾನದ ವಠಾರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ೩ ಲಕ್ಷ ರೂ ವೆಚ್ಚದ ನೂತನ ಬಾವಿಗೆ ಭಾನುವಾರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಭೂಮಿಪೂಜೆ ನಡೆಸಿದರು. ಅರ್ಚಕ ಸುಬ್ರಹ್ಮಣ್ಯ ಭಟ್ ಪೂಜಾ ವಿಧಿವಿಧಾನ ನೆರವೇರಿಸಿದರು.gur-mar-14-bhumipooje(guruva mukhari)

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಬಾಳಪ್ಪ ಯಾನೆ ಬಾಲಕೃಷ್ಣ ಪೂಜಾರಿ, ಸಂಪಾ, ಬಬಿತಾ, ಛಾಯಾ, ಮಾಜಿ ಸದಸ್ಯರಾದ ಟಿ. ಹನೀಫ್, ಹರಿಶ್ಚಂದ್ರ, ಪದ್ಮಿನಿ, ಸ್ಥಳೀಯರಾದ ಉಮೇಶ್ ಶೆಟ್ಟಿ ಬೆಳ್ಳೂರುಗುತ್ತು, ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು, ಬಿಜೆಪಿ ಮುಖಂಡ ಸೋಮಯ್ಯ ಬೆಳ್ಳೂರು, ಪಂಚಾಯತ್ ಮಾಜಿ ಅಧ್ಯಕ್ಷ ಗುರುವ ಮುಖಾರಿ, ಕರುಣಾಕರ ಬೆಳ್ಳೂರು, ಗುತ್ತಿಗೆದಾರ ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.gur-mar-14-bhumipooje(yashavanth shetty)-1

ಇಲ್ಲಿ ಎಪ್ರಿಲ್ ೧೭ ಮತ್ತು ೧೮ರಂದು ಶ್ರೀ ಕೋರ‍್ದಬ್ಬು, ತನ್ನಿಮಾನಿಗ, ರಾಹು, ಗುಳಿಗ ಮತ್ತು ಪಂಜುರ್ಲಿ ದೈವಗಳಿಗೆ ಕಾಲಾವಧಿ ನೇಮೋತ್ಸವ ಜರುಗಲಿದೆ.
gur-mar-14-bhumipooje(yashavanth shetty)-2

gur-mar-14-bhumipooje

By Suddi9

Leave a Reply

Your email address will not be published. Required fields are marked *