ಶ್ರೀನಿವಾಸಪುರ: ಕೇಂದ್ರ ಸರ್ಕಾರ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಹೇಳಿದರು.
ತಾಲ್ಲೂಕಿನ ರೋಜೇನಹಳ್ಳಿ ಕ್ರಾಸ್‌ನಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಶನಿವಾರ ರಸ್ತೆ ತಡೆ ನಡೆಸುತ್ತಿದ್ದ ರೈತ ಸಂಘಟನೆಗಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತ ದೇಶದ ಬೆನ್ನೆಲುಬು ಎಂಬುದನ್ನು ಮರೆತು, ಕಾರ್ಪೊರೇಟ್ ಕಂನಿಗಳ ಪರವಾಗಿ ಭೂ ತಿದ್ದುಪಡಿ ಮಸೂದೆಗಳನ್ನು ಜಾರಿಗೊಳಿಸಿರುವುದು ಪ್ರಜಾಪ್ರಭುತ್ತ ವಿರೋಧಿ ಕೃತ್ಯವಾಗಿದೆ ಎಂದು ಹೇಳಿದರು.6svp2ep

ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ್ಯ ರೈತ ಸಂಘದ ನೇತೃತ್ವಲ್ಲಿ ನಡೆದ ರಸ್ತೆ ತಡೆ ಕಾರ್ಯಕ್ರಮದಲ್ಲಿ ಮುಖಂಡರಾದ ವೀರಭಧ್ರಸ್ವಾಮಿ, ಬೈರಾರೆಡ್ಡಿ, ಶ್ರೀರಾಮರೆಡ್ಡಿ, ನವೀನ್ ಕುಮಾರ್, ಜಂಜಪ್ಪ, ಸೈಯದ್ ಫಾರೂಕ್, ರಮೇಶ್, ದೇವರಾಜ್, ವೀರಪ್ಪರೆಡ್ಡಿ, ನಾಗರಾಜ್ ಶ್ರೀಧರ್, ಶಶಿಧರ್ ರೆಡ್ಡಿ, ಅಸ್ಲಾಂ, ನಾರಾಯಣಸ್ವಾಮಿ ಇದ್ದರು.

By Suddi9

Leave a Reply

Your email address will not be published. Required fields are marked *