ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಕಾಲಾವಧಿ ಬಂಡಿ ಜಾತ್ರೆ ಫೆ. ೧೩ರಿಂದ ೧೫ರವರೆಗೆ ಜರುಗಲಿದೆ.ಫೆ. ೧೩ರಂದು ಪ್ರಾತಃಕಾಲ ೫ ಗಂಟೆಗೆ ಬದಿನ ಮನೆಯಿಂದ ದೈವಸ್ಥಾನಕ್ಕೆ ಭಂಡಾರ ಹೊರಡಲಿದೆ. ಬೆಳಿಗ್ಗೆ ೮ ಗಂಟೆಗೆ ಧ್ವಜಾರೋಹಣ, ೧೧ರಿಂದ ೧ ಗಂಟೆಯವರೆಗೆ ಕಂಚಿಲು ಸೇವೆ ಮತ್ತು ಉರುಳು ಸೇವೆ, ರಾತ್ರಿ ೮ಕ್ಕೆ ಶ್ರೀ ಮೈಸಂದಾಯ ದೈವದ ನೇಮ, ರಾತ್ರಿ ೧೦ಕ್ಕೆ ಶ್ರೀ ಮುಂಡಿತ್ತಾಯ ದೈವದ ನೇಮ, ಮುಂಜಾನೆ ಬಂಡಿ ರಥೋತ್ಸವ, ಅಭಯ ಪ್ರಧಾನ, ಪ್ರಸಾದ ವಿತರಣೆ ನಡೆಯಲಿದೆ.5vp bandi jathre

ಫೆ. ೧೪ರಂದು ರಾತ್ರಿ ೧೦ಕ್ಕೆ ಶ್ರೀ ಧೂಮಾವತಿ, ಬಂಟ, ಪರಿವಾರ ದೈವಗಳ ನೇಮ, ಅಭಯ ಪ್ರಧಾನ, ಪ್ರಸಾದ ವಿತರಣೆ ನಡೆಯಲಿದೆ. ಫೆ. ೧೫ರಂದು ಸಂಜೆ ೭ಕ್ಕೆ ತುಡಾರ ಬಲಿ(ದೀಪಾರಾಧನೆ) ಉತ್ಸವ, ಧ್ವಜಾವರೋಹಣ, ಭಂಡಾರ ನಿರ್ಗಮನವಾಗಲಿದೆ. ಬಂಡಿ ಜಾತ್ರೆಯ ಪ್ರಯುಕ್ತ ಫೆ. ೧3ರಂದು ಮಧ್ಯಾಹ್ನ ೧ ಗಂಟೆಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಜರುಗಲಿದೆ.

By Suddi9

Leave a Reply

Your email address will not be published. Required fields are marked *