ಬಂಟ್ವಾಳ: ದೇಶದಾದ್ಯಂತ ಎಲ್ಲಾ ರಾಜ್ಯ,ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಮೊದಲ ಹಂತವಾಗಿ ಕೊರೋನಾ ವಾರಿಯಸ್೯ಗಳಾಗಿ ಕಾರ್ಯನಿರ್ವಹಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ  ಕೋವಿಡ್-19 ಚುಚ್ಚುಮದ್ದು ಲಸಿಕಾಕರಣಕ್ಕೆ ಬಂಟ್ವಾಳ ನಗರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲು ಶುಕ್ರವಾರ  ಚಾಲನೆ ನೀಡಲಾಯಿತು.   ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಉಪಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮೊದಲ ಲಸಿಕೆ ಪಡೆದ ಡಿಗ್ರೂಪ್ ನೌಕರ ಗಣೇಶ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ,ಬಳಿಕ ಲಸಿಕೆಯನ್ನು ಪಡೆದರು. IMG-20210116-WA0017

ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ತಾಲೂಕಿನಲ್ಲಿ ಮೊದಲ ಲಸಿಕೆ ಪಡೆದುಕೊಂಡ ನೌಕರ ಗಣೇಶ್ ಅವರಿಗೆ ಧೈರ್ಯ ತುಂಬಿ ಅಭಿನಂದಿಸಿದರು.  ಸ್ವದೇಶಿ ವ್ಯಾಕ್ಸಿನ್ ಇದಾಗಿದ್ದು,ಯಾವುದೇ ಸಂದೇಹವಿಲ್ಲದೆ ನಿರ್ಭಯವಾಗಿ ಈ ಲಸಿಕೆಯನ್ನು ಪಡೆಯಬಹುದು,ಅತ್ಯಂತ ಕನಿಷ್ಠ ಬೆಲೆಯಲ್ಲು ಈ  ವ್ಯಾಕ್ಸಿನ್ ಲಭ್ಯವಾಗಲಿದೆ ಎಂದರು. ಪ್ರಧಾನಿ ನರೇಂದ್ರಮೋದಿಯವರ ದಿಟ್ಟ ಹೆಜ್ಜೆಯಿಂದ ದೇಶದಲ್ಲಿ ಅತೀ ಶೀಘ್ರವಾಗಿ ಆರೋಗ್ಯ ಇಲಾಖೆಯ ಮೂಲಕ ಜನಸಾಮಾನ್ಯರಿಗೂ ತಲುಪಲಿದೆ.IMG_20210116_122609

ಭಾರತದ ವಿಜ್ಞಾನಿಗಳ ಮೇಲಿಟ್ಟಿರುವ ಭರವಸೆಯಿಂದಾಗಿ ಜಗತ್ತಿನ  ಇತರೆ ದೇಶವು ಲಸಿಕೆಗಾಗಿ ಕಾತರದಿಂದ ಕಾಯುತ್ತಿದೆ ಎಂದರು.  ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷ ಜೆಸಿಂತಾ ಡಿಸೋಜ,ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ,ಜಿಪಂ ಸದಸ್ಯರಾದ ರವೀಂದ್ರ ಕಂಬಳಿ,  ತುಂಗಪ್ಪ ಬಂಗೇರ,   ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ  ದೇವದಾಸ ಶೆಟ್ಟಿ, ತಹಶೀಲ್ದಾರ್ ರಶ್ಮೀ ಎಸ್ ಆರ್, ತಾಪಂ ಇಒ ರಾಜಣ್ಣ , ಸಿಡಿಪಿಒಗಳಾದ ಗಾಯತ್ರಿ ಆರ್ ಕಂಬಳಿ, ಸುಧಾಜೋಶಿ,  ಶಿಕ್ಷಣಾಧಿಕಾರಿ ಜ್ಞಾನೇಶ್,   ಶಿಕ್ಷಣಾ ಇಲಾಖೆಯ ಸಂಯೋಜಕಿ  ಸುಜಾತಭಟ್,ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಪುಪ್ಪಲತಾ,ಡಾ.ಸೌಮ್ಯ ಉಪಸದಥಿತರಿದ್ದರು.ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಸ್ವಾಗತಿಸಿ, ಪ್ರಸ್ತಾವನೆಗೈದರು.ಸುರೇಶ್ ಪರ್ಕಳ ಕರ್ಯಕ್ರಮ ನಿರೂಪಿಸಿ,ಕೊನೆಯಲ್ಲಿ ವಂದಿಸಿದರು.

 ಧೈರ್ಯದಿಂದ ಲಸಿಕೆ ಪಡೆಯಿರಿ,ಕೋವಿಡ್ ತಡೆಗಟ್ಟಿ: ಗಣೇಶ್


ತಾಲೂಕಿನಲ್ಲಿ ಮೊದಲ ಲಸಿಕೆ ಪಡೆದ ಆಸ್ಪತ್ರೆಯ ಡಿ’ಗ್ರೂಪ್ ನೌಕರ ಗಣೇಶ್   ನಿಯಮದಂತೆ ಆರ್ಧತಾಸಿನ ಒಬ್ಸರ್ ವೇಶನ್ ಮುಗಿಸಿ  ನಿಗದಿತ ಕೊಠಡಿಯಿಂದ ಆರೋಗ್ಯವಂತನಾಗಿ ನಗುಮುಖದಿಂದ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಕೋವಿಡ್ -19 ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೋರ್ವರು ನಿರ್ಭಯವಾಗಿ ಲಸಿಕೆಯನ್ನು ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂಬ ಸಂದೇಶ ನೀಡಿದರು.

ಲಸಿಕೆ ಪಡೆಯುವ ಕೊಠಡಿ ಪ್ರವೇಶಿಸುವಾಗ ಕೊಂಚ ಭಯಪಟ್ಟೆ , ಬಳಿಕ ಸುಧಾರಿಸಿಕೊಂಡು ಲಸಿಕೆ ಪಡೆದೆ,ಆರ್ಧತಾಸು ರಿಲಾಕ್ಸ್ ತೆಗೆದುಕೊಂಡ ನಂತರ ಈಗ ಸಂಪೂರ್ಣ ಆರೋಗ್ಯವಾಗಿದ್ದು,ಯಾವುದೇ ತೊಂದರೆ ಇಲ್ಲ,ಹಾಗಾಗಿ ಯಾರೂ ಕೂಡ ಭಯಪಡುವ ಅಗತ್ಯವಿಲ್ಲ,ಕೊರೋನ ವೈರಸ್ ವಿರುದ್ಧದ ಲಸಿಕೆ ಪಡೆದು ಆರೋಗ್ಯವಾಗಿರಿ ಎಂದರು.ಈ ಸಂದರ್ಭ ಆರೋಗ್ಯಾಧಿಕಾರಿ ಡಾ.ದೀಪಾಪ್ರಭು ಜತೆಗಿದ್ದರು.

By Suddi9

Leave a Reply

Your email address will not be published. Required fields are marked *