ಕೈಕಂಬ: ಗುರುಪುರ ಗೋಳಿದಡಿ ಗುತ್ತಿನ `ಗುತ್ತುದ ವರ್ಸೊದ ಪರ್ಬೊ’ ಜ. ೧೯ ಮತ್ತು ೨೦ರಂದು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.೧೯ರಂದು ಬೆಳಿಗ್ಗೆ ಶ್ರೀ ವೈದ್ಯನಾಥಾದ್ಯ ಪಂಚ ದೈವಗಳಿಗೆ ಪೂಜೆ, ೧೦:೩೦ರಿಂದ ಮಧ್ಯಾಹ್ನ ೧೨:೩೦ರವರೆಗೆ ಗೋಳಿದಡಿ ಗುತ್ತಿನ ಚಾವಡಿ ಮಿತ್ರ ಬಳಗದವರಿಂದ `ಭಜನಾ ಸಂಕೀರ್ತನೆ’ ಜರುಗಲಿದೆ. ಸಂಜೆ ೬ರಿಂದ ರಾತ್ರಿ ೧೧ರವರೆಗೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಮೇಳದವರಿಂದ `ಶ್ರೀ ನಾಗವೃಜ ಕ್ಷೇತ್ರ ಮಹಾತ್ಮೆ’ ಕಾಲಮಿತಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

gur-jan-9-vardhamana shetty

೨೦ರಂದು ಬೆಳಿಗ್ಗೆ ೧೦:೩೦ರಿಂದ ಮಧ್ಯಾಹ್ನ ೧೨:೩೦ರವರೆಗೆ ಭಜನಾ ಸಂಕೀರ್ತನೆ, ಸಂಜೆ ೬ಕ್ಕೆ ಶ್ರೀ ವೈದ್ಯನಾಥೇಶ್ವರ ವೇದಿಕೆಯಲ್ಲಿ ಗುತ್ತಿನ ವರ್ಷದ ಒಡ್ಡೋಲಗ.  ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮಶ್ರೀ ಶಿರೋಮಣಿ ಕೆ ಎಸ್ ನಿತ್ಯಾನಂದ ಗುರು ಸಾನಿಧ್ಯದ ಒಡ್ಡೋಲಗದಲ್ಲಿ(ಸಭೆ) ಉದಯಕೃಷ್ಣ ಚಾರಿಟೇಬಲ್ ಟ್ರಸ್ಟ್(ರಿ) ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಅಧ್ಯಕ್ಷತೆ ವಹಿಸಲಿದ್ದಾರೆ. ಪಡ್ಯಾರಬೆಟ್ಟು ಶ್ರೀ ಕೊಡಮಣಿತ್ತಾಯ ಕ್ಷೇತ್ರ(ಪೆರಿಂಜ) ಆಡಳಿತಗಾರ ಜೀವಂಧರ ಕುಮಾರ್ ಯಾನೆ ಕಂಚಿ ಪೂವಣಿ ದೀಪ ಬೆಳಗಿಸಲಿದ್ದಾರೆ. ಜೆಪ್ಪು ಗುಡ್ಡೆದ ಗುತ್ತು ಭುಜಂಗ ಶೆಟ್ಟಿ ದಿಕ್ಸೂಚಿ ಮಾತುಗಳನ್ನಾಡಿದರೆ ಮುಖ್ಯ ಅತಿರ್ಥಿಗಳಾಗಿ ಡಾ. ವೈ ಸನತ್ ಹೆಗ್ಡೆ(ಯೇನಗುಡ್ಡೆ ಪಠೇಲರ ಮನೆ, ಕಟಪಾಡಿ), ಭಾಗ್ಯರಾಜ ಆಳ್ವ ಕಾರಮೊಗರುಗುತ್ತು, ಸುಧಾಕರ ಶೆಟ್ಟಿ ದೋಣಿಂಜೆಗುತ್ತು, ದಾಮೋದರ ನಿಸರ್ಗ(ಮೊಕ್ತೇಸರ, ಬ್ರಹ್ಮಬೈದರ್ಕಳ ಗರಡಿ, ಕಂಕನಾಡಿ) ಮತ್ತು ಸತೀಶ್ ಕಾವ ಬೆಳ್ಳಿಬೆಟ್ಟು ಗುತ್ತು ಉಪಸ್ಥಿತರಿರುವರು.gur-jan-9-logo

ಸಂಜೆ ೭:೩೦ರಿಂದ ೧೦:೧೫ರವರಗೆ ಕಾರ್ಕಳದ ಶ್ರೀ ಅನಂತಶಯನ ಬಂಟ ಮಹಿಳಾ ಯಕ್ಷಗಾನ ಮಂಡಳಿ ಕಲಾವಿದರಿಂದ `ತುಳುನಾಡ ಸಿರಿ’ ತುಳು ಯಕ್ಷಗಾನ ತಾಳಮದ್ದಲೆ ಜರುಗಲಿದೆ. ಕೋವಿಡ್-೧೯ರ ಪ್ರತಿಬಂಧಕದನ್ವಯ ಈ ವರ್ಷ ಶಕ್ತಿಕಲ್ಲು ಎತ್ತುವ ಸ್ಪರ್ಧೆ, `ಪರ್ಬೊದ ಸಿರಿ'(ಗ್ರಾಮೀಣ ಸಂತೆ) ಇರುವುದಿಲ್ಲ ಎಂದು ಗೋಳಿದಡಿ ಗುತ್ತಿನ ಗಡಿಕಾರ ಶ್ರೀ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರ ಪತ್ರಿಕಾ ಪ್ರಕಟಣೆ ತಿಳಿಸಿದೆ.gur-jan-9-golidadi

By Suddi9

Leave a Reply

Your email address will not be published. Required fields are marked *