ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ವಿರುದ್ಧ   ಮಾನಹಾನಿಕಾರಕ ಹೇಳಿಕೆ ನೀಡಿರುವ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣರ ಪುಣಚ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಬಂಟ್ವಾಳ ಕ್ಷೇತ್ರ ಬಿಜೆಪಿ  ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ   ರವಿಕಿರಣ್ ಪುಣಚ ವಿರುದ್ಧ ದೂರು ದಾಖಲಿಸಲಾಗಿದೆ. IMG-20201017-WA0032

ಅತ್ಯಂತ ಕೀಳುಮಟ್ಟದ ಪದಗಳನ್ನು ಬಳಸಿ ಬಹಿರಂಗವಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನ ಮಂತ್ರಿ ಅವರ ವಿರುದ್ಧ ಮಾನಹಾನಿಕರ ಹೇಳಿಕೆಯನ್ನು ನೀಡಿಳದ್ದು ಅಸಂವಿದಾನಿಕ ಅನಾಗರಿಕ ಪದ ಪ್ರಯೋಗ ಮಾಡಿ ಏಕವಚನದಿಂದ ನಿಂದಿಸಿ ಕಾನೂನಿನ ಬಹಿರಂಗ ಸವಾಲೆಸೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಂಟ್ವಾಳ ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾದ  ಅಧ್ಯಕ್ಷರಾದ ಆನಂದ ಶಂಭೂರು ಪ್ರ.ಕಾರ್ಯದರ್ಶಿ ಮಚ್ಚೇಂದ್ರ ಸಾಲ್ಯಾನ್ ಬಿ.ಜೆ.ಪಿ ಮಂಡಲದ ಪ್ರ.ಕಾರ್ಯದರ್ಶಿ ಡೊಂಬಯ ಅರಳ, ಹಿ.ವರ್ಗ ಮೋರ್ಚಾದ ಕಾರ್ಯದರ್ಶಿ ಚಿದಾನಂದ ಕಲ್ಲಡ್ಕ, ಸದಸ್ಯರಾದ ಅಶೋಕ್ ಮಾದೋಳಿ ರವರ ನಿಯೋಗ ತೆರಳಿ  ಠಾಣೆಯಲ್ಲಿ ದೂರು ದಾಖಲಿಸಿದೆ.

By Suddi9

Leave a Reply

Your email address will not be published. Required fields are marked *