ಪೊಳಲಿ:ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ಪಂಚಮ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ 108 ದಿನಗಳ “ಸಂಧ್ಯಾಭಜನಾ ಸೇವೆ” ಯಲ್ಲಿ 50ನೇ ದಿನದ ಭಜನಾ ಸಂಕೀರ್ತನೆಯನ್ನು ಶ್ರೀ ವೈಭವಿ ವೃಂದ ಮಂಗಳೂರು ಇವರು ನಡೆಸಿಕೊಟ್ಟರು.
ಶ್ರೀ ಅಖಿಲೇಶ್ವರ ದೇವಸ್ಥಾನದ ಅರ್ಚಕ ವಾಸುದೇವ ಮಯ್ಯ ಪ್ರಸಾದ ನೀಡಿದರು. ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
