ಬಂಟ್ವಾಳ: ಉತ್ತರ ಪ್ರದೇಶದ ಸಿಎಂ ಶ್ರೀ ಯೋಗಿ ಆದಿತ್ಯನಾಥ್ ರವರು ದ.ಕ.ಜಿಲ್ಲೆಗೆ ಆಗಮಿಸಿದರೆ ಅವರ ಮುಖಕ್ಕೆ ಮಸಿ ಬಳಿಯುತ್ತೇನೆ ಎಂದು ಹೇಳಿಕೆ ನೀಡಿರುವ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಯವರ  ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ,ಬಿಜೆಪಿ ಮುಖಂಡ ಪ್ರಭಾಕರ ಪ್ರಭು ರವರು ಶ್ರೀ ಯೋಗಿ ಆದಿತ್ಯನಾಥ್ ರವರ ಮುಖಕ್ಕೆ ಮಸಿ ಬಳಿಯೋದು ಬಿಡಿ ತಾಕತ್ತಿದ್ದರೆ ಅವರ ಮೈ ಮುಟ್ಟಿ ನೋಡಲಿ ಎಂದು ತಿರುಗೇಟು ನೀಡಿದ್ದಾರೆ. IMG-20200727-WA0023

ಹಿಂದೂ ಸಾಧುಸಂತ ಯೋಗಿ ಆದಿತ್ಯನಾಥ್ ರವರ ಬಗ್ಗೆ ಈ ರೀತಿಯ ಮಾನಹಾನಿ ಹೇಳಿಕೆ ನೀಡುವುದು ಮಿಥುನ್ ರೈ ಗೆ ಶೋಭೆ ತರುವಂತದಲ್ಲ .  ಈ ರೀತಿಯ  ಟೀಕೆ ಕರಾವಳಿಯ ಹಿಂದೂ ರಾಮ ಭಕ್ತರು ಸುತಾರಾಂ ಸಹಿಸಲು ಸಾಧ್ಯವಿಲ್ಲ. ಯೋಗಿಯವರ ಮುಖಕ್ಕೆ ಮಸಿ ಬಳಸಿದರೆ ಮುಂದಿನ ಪರಿಣಾಮ ಏನಾಗುತ್ತದೆ ಎಂಬ ಪ್ರಜ್ಞೆ ಇದೆಯೇ ಎಂದು  ಪ್ರಭು  ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

ಯೋಗಿ ಆದಿತ್ಯನಾಥ್ ಅಂದರೆ ಏನೂ ಅಂದು ಕೊಂಡಿದ್ದಾರೆ ಈ ಮಿಥುನ್ ರೈ? ಭಾರತದ ಸಂತ ಶ್ರೇಷ್ಠ ಪರಂಪರೆಯಲ್ಲಿ ನಾಥ ಪರಂಪರೆಯು ಒಂದಾಗಿದ್ದು,ಇದರ ಸಾನಿಧ್ಯ ಮಂಗಳೂರು ಕದ್ರಿ ಮಂಜುನಾಥೇಶ್ವರ ಸಾನಿಧ್ಯದವರೆಗಿದೆ.ಇದನ್ನು ಅರಿತುಕೊಂಡು ಯೋಗಿ ಬಗ್ಗೆ ಮಾತಾನಾಡಲಿ ಅಲ್ಪಸಂಖ್ಯಾತರ ವೋಟ್ ಬ್ಯಾಂಕಿನ ಉದ್ದೇಶಕ್ಕಾಗಿ ಹಾಗೂ ಇದನ್ನೇ ಮಾನದಂಡವನ್ನಾಗಿಸಿ ಪಕ್ಷದಲ್ಲಿ ಉನ್ನತ ಸ್ಥಾನ ಗಿಟ್ಟಿಸುವ ಹುನ್ನಾರವಿರಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಹಿಂದೂ ವಿರೋಧಿ ಮತ್ತು ಸಾಧು,ಸಂತರನ್ನು ಟೀಕಿಸುವ ಕೀಳುಮಟ್ಟದ ರಾಜಕೀಯ ಮಾತಿನ ಹೇಳಿಕೆಯನ್ನು ಮತ್ತು ಇಂತಹ ಮಾತಿನಿಂದಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳಿಂದ ಗೆಲ್ಲಬಹುದು  ಎಂಬ ಭ್ರಮೆ ಇದ್ದರೆ ಇವತ್ತೆ ಬಿಟ್ಟು ಬಿಡಿ ಎಂದು ತಿಳಿಸಿರುವ ಪ್ರಭಾಕರ ಪ್ರಭು ಈ ಹಿಂದೆ ರಾ. ಸ್ವ. ಸೇ. ಸಂಘದ ಹಿರಿಯರಿಗೆ ಇದೇ ರೀತಿ ಟೀಕೆ ಮಾಡಿದ ಪರಿಣಾಮವಾಗಿ ಕರಾವಳಿಯ ಹಿಂದೂ ಭಕ್ತರು ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಹೀನಾಯವಾಗಿ ಸೋಲಿಸಿ ಹಿಂದೂ ಕಾರ್ಯಕರ್ತರ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿರುವುದನ್ನು ಆತ್ಮಾವಲೋಕನ ಮಾಡಿಸಿಕೊಳ್ಳುವುದು ಒಳಿತು ಎಂದೂ ಕಿವಿ ಮಾತು ಹೇಳಿದ್ದಾರೆ.

ಇನ್ನು ಮುಂದಕ್ಕೆ ಶ್ರೀಯೋಗಿ ಆದಿತ್ಯನಾಥ್ ಸೇರಿದಂತೆ ಯಾವುದೇ ಸಾಧು ಸಂತರು ಹಾಗೂ ದೇಶ ಭಕ್ತರಿಗೆ ಟೀಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಿ ಎಂದು  ಪ್ರಭಾಕರ ಪ್ರಭು ಎಚ್ಚರಿಸಿದ್ದಾರೆ.

By Suddi9

Leave a Reply

Your email address will not be published. Required fields are marked *