ಬಂಟ್ವಾಳ:  ಮಂಗಳೂರು ಕ್ಷೇತ್ರಕ್ಕೊಳಪಟ್ಟ  ಸಜೀಪಪಡು, ಪಜೀರು ಹಾಗೂ ಕುರ್ನಾಡು ಗ್ರಾ.ಪಂ.ಗಳಿಗೆ ಸಂಬಂಧಿಸಿ ಒಬ್ಬರೇ ಆಡಳಿತಾಧಿಕಾರಿ ಇದ್ದು, ಅಲ್ಲಿನ ಡೋಂಗಲ್ ಗೊಂದಲದ ಕುರಿತು ಪಿಡಿಒಗಳು ಶಾಸಕರ ಗಮನ ಸೆಳೆದರು.  ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರು ಬಂಟ್ವಾಳ ತಾ.ಪಂ.ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಮಂಗಳವಾರ ತಮ್ಮ ವ್ಯಾಪ್ತಿಗೆ ಬರುವ ಬಂಟ್ವಾಳ ತಾಲೂಕಿನ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಈ ಮೂರು ಪಂಚಾಯತ್ ನ ಪಿಡಿಒಗಳು ಶಾಸಕರ ಗಮನಕ್ಕೆ  ತಂದರು.ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು  ಜಿ.ಪಂ.ನ ಸಂಬಂಧಪಟ್ಟ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಗ್ರಾ.ಪಂ.ಗಳಲ್ಲಿ ಬಾಕಿ ಉಳಿದಿರುವ ೯೪ಸಿ ಹಕ್ಕುಪತ್ರ ವಿತರಣೆ, ಪರಿಹಾರ ಧನ ವಿತರಣೆಯ ಕುರಿತು ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರಿಂದ ಮಾಹಿತಿ ಪಡೆದು ಅ. ೧೨ರಂದು ಬಂಟ್ವಾಳ ತಾ.ಪಂ.ಸಭಾಂಗಣದಲ್ಲಿ ವಿತರಣಾ ಕಾರ್ಯಕ್ರಮ ಹಾಗೂ ಅಧಿಕಾರಿಗಳ ಸಭೆ ನಡೆಸುವುದಾಗಿ ತಿಳಿಸಿದರು.ಗ್ರಾ.ಪಂ.ಗಳ ೨೦ ಮನೆಗಳನ್ನು ಯಾವ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಪಿಡಿಒಗಳನ್ನು ಪ್ರಶ್ನಿಸಿದ ಶಾಸಕರು, ನಿಮ್ಮ ಮೇಲಿನ ವಿಶ್ವಾಸದಿಂದ ಸಹಿ ಹಾಕುವುದಾಗಿ ತಿಳಿಸಿದರು.

೧೫ನೇ ಹಣಕಾಸು ಯೋಜನೆಯ ಕ್ರೀಯಾಯೋಜನೆಯ ಗೊಂದಲಗಳ ಕುರಿತು ಪಿಡಿಒಗಳು ತಿಳಿಸಿದರು. ಈ ಸಂಬಂಧ ಸುದೀರ್ಘ ಚರ್ಚೆಯು ನಡೆಯಿತು.    ಪ್ರಾರಂಭದಲ್ಲಿ ಬಂದ ಸೂಚನೆಯಲ್ಲಿ ಅಂಗವಿಕಲರಿಗೆ ೫ ಶೇ.ಅನುದಾನ ಮೀಸಲಿಡುವ ವಿಚಾರವಿರಲಿಲ್ಲ. ಪ್ರಸ್ತುತ ಕೆಲಸಗಳನ್ನು ಅಪ್‌ಲೋಡ್ ಮಾಡಿದ ಬಳಿಕ ೫ ಶೇ. ಮೀಸಲಿಡಲು ತಿಳಿಸಲಾಗಿದೆ. ಆದರೆ ಅಲ್ಲಿ ಕೆಲಸ ಬದಲಾವಣೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಬಾಳೆಪುಣಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಸಕರ ಗಮನಕ್ಕೆ ತಂದರು.

ಇತರೆ ಪಿಡಿಒಗಳು ಧ್ವನಿ ಗೂಡಿಸಿದರು.ನಂತರ ಸುತ್ತೋಲೆಯಂತೆ ಮುಂದುವರಿಯುವಂತೆ ಶಾಸಕರು ಸಲಹೆ ನೀಡಿದರು.ಹಾಗೆಯೇ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆಯು ಸೂಚಿಸಿದರು.ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಶಾಸಕರ ಆಪ್ತ ಕಾರ್ಯದರ್ಶಿ ಚಂದ್ರಶೇಖರ್ ಪಾತೂರು, ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಉಪಸ್ಥಿತರಿದ್ದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *