ಬಂಟ್ವಾಳ: ಕೊರೋನ ಮಹಾಮಾರಿ ಸಮುದಾಯಕ್ಕೆ ಹರಡುವುದು ಮತ್ತು ಸಾವಿನ ಸಂಖ್ಯೆಯನ್ನು ಇಳಿಮುಖಗೊಳಿಸುವ ದೆಸೆಯಲ್ಲಿ ಸರಕಾರದ ಸೂಚನೆಯಂತೆ ಆರೋಗ್ಯ ಇಲಾಖೆ ಪ್ರತಿಗ್ರಾಮದಲ್ಲಿ ರಾಫಿಡ್ ಆ್ಯಂಟಿಜನ್ ಟೆಸ್ಟ್ ನಡೆಸಲಾಗುತ್ತಿದ್ದು,ಶದೀಗ ಸರಕಾರಿ ಕಚೇರಿಯಲ್ಲು ಆರಂಭಿಸಲಾಗಿದೆ. ಶುಕ್ರವಾರ ಬಿ.ಸಿ.ರೋಡಿನಲ್ಲಿರುವ ಮಿನಿವಿಧಾನಸೌಧದಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತೆಯರು ಕಚೇರಿಗೆ ಅಗತ್ಯದ ಕೆಲಸಕ್ಕಾಗಿ ಅಮಿಸುತ್ತಿದ್ದ ಜನಸಮಾನ್ಯರನ್ನು ಮನವೊಲಿಸಿ ಈ ಟೆಸ್ಟ್ ನ್ನು ಮಾಡಿಸಿದ್ದಾರೆ.
16-52-23-IMG-20200911-WA0066-768x432ಕೆಲವರು ಸ್ವ ಇಚ್ಚೆಯಿಂದಲೇ ಟೆಸ್ಟ್ ಮಾಡಿಸಿಕೊಂಡರೆ,ಇನ್ನು ಅವರ ಪಕ್ಕವು ಸುಳಿಯದೆ ಕಾಲ್ಕಿತ್ತ ದೃಶ್ಯವು ಕಂಡುಬಂತು.ಆದರೆ ಯಾರನ್ನು ಬಲವಂತವಾಗಿ ಟೆಸ್ಟ್ ಮಾಡದೆ,ಸ್ವಿಚ್ಚೆಯಿಂದ ಬಂದವರನ್ನು ಪರೀಕ್ಷೆಗೊಳಪಡಿಸಿ ಕಳುಹಿಸಲಾಗುತಿತ್ತು.ಕೊರೋನ ಸಮುದಾಯಕ್ಕೆ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ರಾಫಿಡ್ ಅ್ಯಂಟಿಜನ್ ಟೆಸ್ಟ್ ನಡೆಸುತ್ತಿದೆ ಸಾರ್ವಜನಿಕರು ಸಹಕರಿಸುವಂತೆ ತಹಶೀಲ್ದಾರ್ ರಶ್ಮೀ ಎಸ್.ಆರ್. ಕೋರಿದ್ದಾರೆ.

By Suddi9

Leave a Reply

Your email address will not be published. Required fields are marked *