ಬಂಟ್ವಾಳ: ಸಾಂಕ್ರಾಮಿಕ ರೋಗಗಳ ತಡೆಗೆ ಜಾಗೃತಿಯೊಂದೆ ಪ್ರಬಲವಾದ ಮದ್ದು ಎಂದು ಪುಂಜಾಲಕಟ್ಟೆ ಪ್ರಾ.ಆ.ಕೇ.ದ ವೈದ್ಯಾಧಿಕಾರಿ ಡಾ.ಸತೀಶ್ ಎಮ್.ಸಿ.ಅವರು ಹೇಳಿದ್ದಾರೆ. ಪಿಲಾತಬೆಟ್ಡು ಗ್ರಾಪಂ ಆಶ್ರಯದಲ್ಲಿ ಶುಕ್ರವಾರ ಪಂಚಾಯತ್ ವಠಾರದಲ್ಲಿ ನಡೆದ ಮಲೇರಿಯಾ ಮಾಸಾಚರಣೆಯ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ಮಳೆಗಾಲದಲ್ಲಿ ಸೊಳ್ಳೆಯಿಂದಾಗಿ ಮಲೇರಿಯಾ,ಡೆಂಗ್ಯುವಿನಂತಹ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವ ನಿಟ್ಟಿನಲ್ಲಿ ನಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಡುವ ಮೂಲಕ ರೋಗವನ್ನು ತಡೆಗಟ್ಟಬಹುದು ಎಂದ ಅವರುವಸಣ್ಣಪುಟ್ಟ ಜ್ವರ ಕಾಣಿಸಿಕೊಂಡರೂ ಅದನ್ನು ನಿರ್ಲಕ್ಷಿಸದೆ ಸಮೀಪದ ಆರೋಗ್ಯ ಕೇಂದ್ರದಲ್ಲಿ ರಕ್ತಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
15-03-16-IMG-20200617-WA0048-1068x544
ಪ್ರಾ.ಕೇ.ದ ಕಿ.ಆ.ಸಹಾಯಕ ಅನ್ವರ್ ಹುಸೇನ್ ಮಾತನಾಡಿ ಆರೋಗ್ಯ ಇಲಾಖೆಯ ಪ್ಋಇಯೊಂದು ಸೂಚನೆಯನ್ನು ಪಾಲಿಸಿಕೊಂಡು ಸ್ವಯಂಜಾಗೃತರಾಗಬೇಕೆಂದರು.ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಜಿಪಂ ಸದಸ್ಯ ತುಂಗಪ್ಪ ಬಂಗೇರ   ಪಿಡಿಒ ರಾಜಶೇಖರ ರೈ,ಪ್ರಾ.ಆ.ಕೇ.ದ ಸಹಾಯಕಿಭವಿತಾ,ಕಿರಿಯ ಆ.ಸಹಾಯಕರು ಉಪಸ್ಥಿತರಿದ್ದರು.ಜಾಥದಲ್ಲಿ ಭಾಗವಹಿಸಿದ್ದ ಆಶಾ,ಅಂಗನವಾಡಿ,ಸ್ತ್ರೀಶಕ್ತಿ ಧ.ಗ್ರಾ.ಯೋ.ಯಸದಸ್ಯರು ಮನೆ,ಮನೆ ತೆರಳಿ ಮಲೇರಿಯಾ,ಡೆಂಗ್ಯು ರೋಗದ ಮುನ್ನಚ್ಚರಿಕಾ ಕ್ರಮಗಳ ಕರಪತ್ರವನ್ನು ವಿತರಿಸಿದರು.

By Suddi9

Leave a Reply

Your email address will not be published. Required fields are marked *