ಬಂಟ್ವಾಳ : ತಾಲೂಕಿನ  ಸಂಗಬೆಟ್ಟು ಗ್ರಾಮದ  ಮಂಚಕಲ್ಲು, ಮೇಲುಗುಡ್ಡೆ ಪರಿಸರದ ಸುಮಾರು140 ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ನ್ನು ಭಾನುವಾರ ಮನೆ,ಮನೆಗೆ ತೆರಳಿ ವಿತರಿಸಲಾಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಉಳಿಪಾಡಿಯವರ  ನೆರವು ತಂಡದ ಸದಸ್ಯರಾದ ಉಮೇಶ್ ಗೌಡ ಸಿದ್ಧಕಟ್ಟೆ, ಸಿದ್ಧಕಟ್ಟೆ ಸ. ವ್ಯ. ಸಂಘದ ನಿರ್ದೇಶಕ  ಸಂದೇಶ್ ಶೆಟ್ಟಿ ಪೊಡುಂಬ, ಗ್ರಾ.ಪಂ ಸದಸ್ಯ ಎಸ್.ಪಿ. ಶ್ರೀಧರ್,  ಉದ್ಯಮಿ ಸಂದೀಪ್ ಶೆಟ್ಟಿಪೊಡುಂಬ ಇವರ ನೇತೃತ್ವದಲ್ಲಿ ಮಂಚಕಲ್ಲು ಮೇಲುಗುಡ್ಡೆ ಪರಿಸರದ ದಿನಸಿ ಸಾಮಾಗ್ರಿ ಗಳ ಕಿಟ್ ವಿತರಿಸಲಾಯಿತು.

IMG-20200405-WA0090
ಕೊರೊನ ಸೋಂಕಿನಿಂದ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ  ದಿನ ಬಳಕೆ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.ಬಿ.ಜೆ.ಪಿ ಮಹಾಶಕ್ತಿ ಕೇಂದ್ರ ದ ಅಧ್ಯಕ್ಷ ರತ್ನಕುಮಾರ್ ಚೌಟ, ತಾಲೂಕು ಪಂಚಾಯತ್ ಸದಸ್ಯ  ಪ್ರಭಾಕರ ಪ್ರಭು, ಗ್ರಾ.ಪಂ. ಅಧ್ಯಕ್ಷ ರಾದ ಗುಲಾಬಿ ಶೆಟ್ಟಿ  ಕಿಟ್ ವಿತರಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತ ನವೀನ್ ಹೆಗ್ಡೆ, ಮಂಚಕಲ್ಲು ಬೂತ್ ನ ಅಧ್ಯಕ್ಷ  ಶರತ್ ಮೇಲುಗುಡ್ಡೆ, ಪ್ರದಾನ ಕಾರ್ಯದರ್ಶಿ ದೀಪಕ್ ಶೆಟ್ಟಿಗಾರ್, ಗಣೇಶ್ ಕೋಟ್ಯಾನ್, ತೇಜಸ್ ಕರ್ಪೆ, ಧನಂಜಯ ಮಂಚಕಲ್ಲು, ಸುನಿಲ್ ಮೇಲುಗುಡ್ಡೆ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *