ಬಂಟ್ವಾಳ:ಸಜಿಪನಡು ಗ್ರಾಮದ ಪುರಾತನ ಅಶ್ವತ್ಥ ಕಟ್ಟೆ ನವೀಕರಣದ ಪ್ರಯುಕ್ತ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಬುಧವಾರದಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಶ್ವತ್ಥ ಪೂಜೆಯನ್ನು ನೆರವೇರಿಸಲಾಯಿತು.
ದ.ಕ.ಜಿಪಂಂ.ಮಾಜಿ ಅಧ್ಯಕ್ಷ ಬಿ. ಸದಾನಂದ ಪೂಂಜಾ ಸಜಿಪಗುತ್ತು ಗಡಿಪ್ರಧಾನರಾದ ಕೋಚು ಭಂಡಾರಿ ಯಾನೆ ಮುಂಡಪ್ಪ ಶೆಟ್ಟಿ, ಚಂದ್ರಶೇಖರ ನಾಯಕ ಕಾಂತಾಡಿಗುತ್ತು, ಮಾಡಂತಡಿ ಗುತ್ತ ಯಶೋಧರ ರೈ ಬರ್ಕೆ, ಮಹಾಬಲ ರೈ , ಕೆ.ರಾಧಾಕೃಷ್ಣ ಆಳ್ವ, ಮುಳ್ಳಂಜ ವೆಂಕಟೇಶ್ವರ ಭಟ್ , ನಗರಿಗುತ್ತು ಜಯರಾಮ್ ಶೆಟ್ಟಿ ,ಪ್ರವೀಣ ಆಳ್ವ, ಗಣೇಶ್ ಶೆಟ್ಟಿ,ಟ ಕೋಚ ಪೂಜಾರಿ ಯಾನೆ ಶಂಕರ ಪೂಜಾರಿ ,ಕುಂಜ ಪೂಜಾರಿ, ಸಜೀಪಗುತ್ತು ಕುಟುಂಬಿಕರು ಉಪಸ್ಥಿತರಿದ್ದರು.
