ಬಂಟ್ವಾಳ: ತಾಲೂಕಿನ ನರಿಕೊಂಬುಗ್ರಾಮದ ನಾಯಿಲ ಓಂ ಶ್ರೀ ಗೆಳೆಯರ ಬಳಗದ 15 ನೇ ವರ್ಷದ ವಾರ್ಷಿಕೋತ್ಸವವು ಸಂಘದ ವಠಾರದಲ್ಲಿ ನಡೆಯಿತು. ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ ಸಂಘದ ಕಟ್ಟಡದಲ್ಲಿ ಶ್ರೀ ಸತ್ಯನಾರಾಯಣ ಪೂಜೆ,ಸಾರ್ವಜಿಕ ಅನ್ನಸಂತರ್ಪಣೆ,ಸಂಜೆ ಸ್ಥಳೀಯ ಅಂಗನವಾಡಿ ಮತ್ತು ಶಾಲಾಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನರಿಕೊಂಬುಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು ಅವರು ಮಾತನಾಡಿ,ಸಂಘದ ಕಾರ್ಯ ಚಟುವಟಿಕೆಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇನ್ನಷ್ಟು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ,ಜೋಡುಮಾರ್ಗ ಜೇಸಿ ಅಧ್ಯಕ್ಷ ಶ್ರೀನಿಧಿ ಭಟ್,ಮುಂಬೈ ಉದ್ಯಮಿ ರಾಜೇಶ್ ಜೀವಿತ,ತುಳು ಚಲನಚಿತ್ರ ನಿರ್ಮಾಪಕ ನಿಶಾನ್ ಭಂಡಾರಿ,ಸತ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಅಧ್ಯಕಗಷ ಲೋಕೇಶ್ ಪಿ.ಜೆ.,ನರಿಕೊಂಬು ಕುಲಾಲ ಸಂಘದ ಅಧ್ಯಕ್ಷ ಮಾಧವ ಕುಲಾಲ್,ಉದ್ಯಮಿಗಳಾದ ಕಿಶೋರ್ ಕಟ್ಟೆಮಾರ್,ಉಮೇಶ್ ನೆಲ್ಲಿಗಿಡ್ಡೆ,ಕೃಷ್ಣ ಕುಮಾರ್ ಶೇಡಿಗುರಿ,ಅರುಣ್ ಬೋರುಗುಡ್ಡೆ,ರಾಜರತ್ನ ಅತಿಥಿಗಳಾಗಿ ಭಾಗವಹಿಸಿದರು. ಸಂಘದ ಅಧ್ಯಕ್ಷ ಕರುಣಾಕರ ನಾಯಿಲ ವೇದಿಕೆಯಲ್ಲಿದ್ದರು.ಇದೇ ವೇಳೆ ಮಾಜಿ ಯೋಧ ದಿನೇಶ್ ಬಿ.,ಸಾಮಾಜಿಕ ಕಾರ್ಯಕರ್ತ ಲಿಂಗಪ್ಪ ಕೊಟ್ಟಾರಿ ಅವರನ್ನು ಸನ್ಮಾನಿಸಲಾಯಿತು.ಸಂಘದ ಕಾರ್ಯದರ್ಶಿ ಶರತ್ ಸ್ವಾಗತಿಸಿದರು. ಕಿರಣ್ ಅಟ್ಲೂರ್ ವರದಿ ವಾಚಿಸಿದರು.ಪ್ರಣಾಮ್ ವಂದಿಸಿದರು.ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.ಬಳಿಕ ತುಳು ನಾಟಕ ಪ್ರದರ್ಶನಗೊಂಡಿತು.
