ಬಂಟ್ವಾಳ; ತಾಲೂಕು ವಿವಿಧ ಪಂಚಾಯತ್ ಗಳಲ್ಲಿ ಸಿಬ್ಬಂದಿ ಯಾಗಿ,  ಕಾರ್ಯದರ್ಶಿ ಯಾಗಿ ಬಳಿಕ  ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ  ವಯೋನಿವೃತ್ತಿ ಹೊಂದಿದ ಪಾಣೆಮಂಗಳೂರು ವೇದವ ಸಪಲ್ಯ ಅವರ ಬೀಳ್ಕೋಡುಗೆ ಕಾರ್ಯಕ್ರಮ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರ ಅಧ್ಯಕ್ಷ ತೆ ಯಲ್ಲಿ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯಿತು.
2
 ಕಾರ್ಯಕ್ರಮದ ಅಧ್ಯಕ್ಷೆತೆ ವಹಸಿದ್ದ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ,ಕಾನೂನಿನ ಸಡಿಲಿಕೆಯ ಮೂಲಕ ಬಡ ಜನರ ಸೇವೆ ಸಲ್ಲಿಸಲು ಅವಕಾಶವಿದೆ ಎಂಬುದನ್ನು ತೋರಿಸಿದ ಅಧಿಕಾರಿ ವೇದವ ಅವರು ಎಂದು ಅವರು ಹೇಳಿದರು.ಬಡ ಜನರಿಗೆ ಸರಕಾರದ ಯೋಜನೆಗಳನ್ನು ಗರಿಷ್ಠ ವಾಗ ನೀಡಿದ ಹೆಗ್ಗಳಿಕೆ ಇವರದು ಎಂದರು.ಪಂಚಾಯತ್ ರಾಜ್ ವ್ಯವಸ್ಥೆ ಯ ಬಗ್ಗೆ ಸಂಪೂರ್ಣ ಮಾಹಿತಿಯಿಂದ , ಅನುಭವಗಳಿಂದ ಒರ್ವ ನಿರಂತರವಾಗಿ ಒಂದೇ ತಾಲೂಕಿನಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಲು ಸಹಕಾರಿ ಯಾಗಿದೆ ಎಂದು ಅವರು ಹೇಳಿದರು.
1ಕಾರ್ಯಕ್ರಮದ ಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ದ ತಾ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸರಕಾರಿ ಸೇವೆಯನ್ನು ಪ್ರಮಾಣಿಕವಾಗಿ ಜನರ ಪ್ರೀತಿ ವಿಶ್ವಾಸ ಗಳಿಸಿ ಮಾಡಿದರೆ ಅಭಿವೃದ್ಧಿ ಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು. ‌ ತಾ.ಪಂ.ಕಚೇರಿ ವ್ಯವಸ್ಥಾಪಕಿ ಶಾಂಭವಿ ರಾವ್ ಅವರು ಸನ್ಮಾನ ಪತ್ರ ವಾಚಿಸಿದರು. ವೇದಿಕೆಯಲ್ಲಿ  ಸಹಾಯಕ ನಿರ್ದೇಶಕ ಪ್ರಶಾಂತ್ , ಪಿ.ಡಿ.ಒಗಳ ಸಂಘದ ಅದ್ಯಕ್ಷ ವಿಜಯಶಂಕರ್ ಆಳ್ವ ಉಪಸ್ಥಿತರಿದ್ದರು.ಪಿ.ಡಿ.ಒ.ಹರೀಶ್ ಸ್ವಾಗತಿಸಿ ಅವಿನಾಶ್ ವಂದಿಸಿದರು.

 

By Suddi9

Leave a Reply

Your email address will not be published. Required fields are marked *