ಬಂಟ್ವಾಳ: ಆದಿ ದ್ರಾವಿಡ ನೌಕರರ ಸಂಘ ಇದರ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ ಚೆಂಡ್ತಿಮಾರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.ಪರಮೇಶ್ವರ ಕೃಷ್ಣಾಪುರ ದೀಪ ಪ್ರಜ್ವಲಿಸಿದರು. ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಪ್ರಮುಖರಾದ ಬೇಬಿ ಮೈರನಪಾದೆ, ರಾಜ ಪಲ್ಲಮಜಲು, ಅಣ್ಣು ವಾಮದಪದವು, ಚಂದಪ್ಪ ಚೆಂಡ್ತಿಮಾರ್, ನಾರಾಯಣ ಬಂಗೇರ ಕೃಷ್ಣಾಪುರ, ಕೆ. ಶೀನ ಸುಧೇಕಾರ್,ದೇವದಾಸ್ ಕೃಷ್ಣಾಪುರ, ರಾಜ ಚೆಂಡ್ತಿಮಾರ್, ಶಿವ ಮೈರನಪಾದೆ, ವಿಮಲ ಶ್ರೀನಿವಾಸ, ಅನಿತಾ ಚೆಂಡ್ತಿಮಾರ್, ಗಂಗಾಧರ್ ಕುಪ್ಪಿಲ, ಅಮ್ಮು ಅರ್ಬಿಗುಡ್ಡೆ, ಜಿನ್ನಪ್ಪ ಸಾಲ್ಯಾನ್ ಕೃಷ್ಣಾಪುರ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಶ್ರೀನಿವಾಸ ಅರ್ಬಿಗುಡ್ಡೆ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಲೋಕಯ್ಯ ಗಾಡಿಪಲ್ಕೆ, ಜೊತೆ ಕಾರ್ಯದರ್ಶಿಯಾಗಿ ಸುಶೀಲ, ಸಂಘಟನಾ ಕಾರ್ಯದರ್ಶಿ ರಾಜೀವ ಕಕ್ಕೆಪದವು, ಕೋಶಾಧಿಕಾರಿ ವಿಶುಕುಮಾರ್ ಚೆಂಡ್ತಿಮಾರ್ ಪದಗ್ರಹಣ ಸ್ವೀಕರಿಸಿದರು
ಲೋಕಯ್ಯ ಗಾಡಿಪಲ್ಕೆ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ರಾಜೀವ ಕಕ್ಯಪದವು ಪ್ರಸ್ತಾವಿಕವಾಗಿ ಮಾತನಾಡಿದರು. ಬಳಿಕ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಚಂದ್ರಹಾಸ ಅರ್ಬಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು. ವಿಶು ಕುಮಾರ್ ಚಂಡ್ತಿಮಾರ್ ವಂದಿಸಿದರು. ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
