ಬಂಟ್ವಾಳ: ಬಂಟ್ವಾಳ ಪೋಲೀಸ್ ಉಪವಿಭಾಗಕ್ಕೆ ಮಂಜೂರಾದ ನೂತನ 3 ಹೈವೇ ಪೆಟ್ರೋಲ್ ವಾಹನಗಳಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶುಕ್ರವಾರ ಚಾಲನೆ ನೀಡಿದರು.
ಬಿ.ಸಿ.ರೋಡಿನ ಮೇಲ್ಸ್ ತುವೆಯಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಾಹನಕ್ಕೆ ಕರ್ನಾಟಕ ಪೊಲೀಸ್ ಧ್ವಜದ ಮೂಲಕ ಸಿಗ್ನಲ್ ನೀಡಿ ವಾಹನಕ್ಕೆ ಚಾಲನೆ ನೀಡಿದರಲ್ಲದೆ ಕೀಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವೆಲಂಟಿನ್ ಡಿಸೋಜ,ಬಂಟ್ವಾಳ ನಗರ ಠಾಣೆಯ ಎಸ್. ಐ.ಅವಿನಾಶ್,ಗ್ರಾಮಾಂತರ ಠಾಣೆಯ ಎಸ್ ಐ.ಪ್ರಸನ್ನ,ಟ್ರಾಫಿಕ್ ಠಾಣೆಯ ಎಸ್ ಐ ರಾಮನಾಯ್ಕ್ ಹಾಗೂ ಬಂಟ್ವಾಳ ಎಸ್ ವಿಎಸ್ ವಿದ್ಯಾಗಿರಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿರಿದ್ದರು.ಇದೇ ವೇಳೆ ರಸ್ತೆ ಸುರಕ್ಷತೆಯ ಬಗ್ಗೆಯು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

