ಕಟೀಲು: ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಳದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ನಿಮಿತ್ತ ಗುರುವಾರ ಕೊಪ್ಪರಿಗೆ ಮೂಹೂರ್ತ ನಡೆಯಿತು. ದೇವಕಿ ಸಂಜೀವ ಶೆಟ್ಟಿ, ವಿಶ್ವನಾಥ ಎಸ್. ಶೆಟ್ಟಿ ಸಹೋದರರು ಕೊಡ ಮಾಡಿದ ಕೊಪ್ಪರಿಗೆಯನ್ನು ದೇವಳದಿಂದ ಅನ್ನದಾನದ ಪಾಕಶಾಲೆಗೆ ಮೆರವಣಿಗೆ ಮೂಲಕ ತಂದು ಕೊಪ್ಪರಿಗೆ ಮೂಹೂರ್ತ ನಡೆಸಲಾಯಿತು.
ಪಾಕಶಾಲೆಯಲ್ಲಿ ಗಣ ಹೋಮ ಮತ್ತು ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಈ ಸಂದರ್ಭ ಕಟೀಲು ಮಾಣಿಲ ಮೋಹನದಾಸ ಸ್ವಾಮೀಜಿ, ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ, ಲಕ್ಷೀ ನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್‍ಕುಮಾರ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಮಂಜುನಾಥ ಭಂಡಾರಿ, ಗಿರಿಧರ್ ಶೆಟ್ಟಿ, ಗಿರೀಶ್ ಶೆಟ್ಟಿ ಕಟೀಲು, ಸುಧೀರ್ ಶೆಟ್ಟಿ, ಬಿಪಿನ್‍ಚಂದ್ರ ಶೆಟ್ಟಿ, ಪ್ರಕಾಶ್ ಕುಕ್ಯಾನ್, ಕೊಡೆತ್ತೂರು ಜಯರಾಮ ಮುಕಾಲ್ದಿ, ಕೆ. ಭುವನಾಭಿರಾಮ ಉಡುಪ, ಶ್ರೀಧರ ಆಳ್ವ ಮಾಗಂದಡಿ, ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ಗುತ್ತಿನಾರ್ ಸುಧಾಕರ ಶೆಟ್ಟಿ ಮೂಡ್ರಗುತ್ತು, ಮಹಾಬಲ ಶೆಟ್ಟಿ ಪಡುಮನೆ, ಹರಿಚಂದ್ರ ಶೆಟ್ಟಿ, ಲೋಕಯ್ಯ ಸಾಲ್ಯಾನ್ ಕೊಂಡೇಲ, ಗಣೇಶ್ ಶೆಟ್ಟಿ ಮಿತ್ತಬೈಲ್, ದೊಡ್ಡಯ್ಯ ಮೂಲ್ಯ, ಮೋನಪ್ಪ ಶೆಟ್ಟಿ ಎಕ್ಕಾರು, ತಿಮ್ಮಪ್ಪ ಕೋಟ್ಯಾನ್, ಅಭಿಲಾಷ್ ಶೆಟ್ಟಿ ಕಟೀಲು, ಸುರೇಶ್ ಶೆಟ್ಟಿ ಪುಚ್ಚಾಡಿ, ವಿಜಯ್ ಮಾಡ ಎಕ್ಕಾರು, ಶಾಂಭವಿ ಶೆಟ್ಟಿ ನಿಡ್ಡೋಡಿ, ಅನ್ವಿತ್ ಕಟೀಲು ಮತ್ತಿತರರು ಉಪಸ್ಥಿತರಿದ್ದರು.
