ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಗೆ ಬಂಟ್ವಾಳ ತಾಲೂಕು ಕಚೇರಿ ವತಿಯಿಂದ ಹಮ್ಮಿಕೊಂಡ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಬಂಟ್ವಾಳ ತಹಶೀಲ್ದಾರ್ ಎಸ್. ಆರ್.ರಶ್ಮಿ ಅವರು ಚಾಲನೆ ನೀಡಿದರು.
ಜ. 15ರಂದು ಬೆಳಗ್ಗೆ 6 ಗಂಟೆಗೆ ಬಂಟ್ವಾಳ ಮಿನಿ ವಿಧಾನ ಸೌಧದ ಮುಂಭಾಗದ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಿಂದ ಪೊಳಲಿ ಶ್ರೀ ಕ್ಷೇತ್ರಕ್ಕೆ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದ ಬಂಟ್ವಾಳ ತಹಶೀಲ್ದಾರ್ ಎಸ್. ಆರ್.ರಶ್ಮಿ ಅವರು ಉತ್ಸಾಹದಿಂದ ಕಾಲ್ನಡಿಗೆ ಜಾಥದಲ್ಲಿ ಪಾಲ್ಗೊಂಡು ಶ್ರೀ ರಾಜರಾಜೇಶ್ವರೀ ತಾಯಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಬಂಟ್ವಾಳ ತಾಲೂಕು ಕಚೇರಿ ಆಹಾರ ಶಿರಸ್ತೇದಾರ್ ಶ್ರೀ ನಿವಾಸ್ , ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಮಹಿಳಾ ಅಧಿಕಾರಿಗಳು ಸಹಿತ ಕಚೇರಿಯ ಸಿಬ್ಬಂದಿಗಳು, ಗ್ರಾಮಕರಣಿಕರು, ಗ್ರಾಮ ಸಹಾಯಕರು, ಸಿಬ್ಬಂದಿಗಳು ಕಾಲ್ನಡಿಗೆ ಜಾಥದಲ್ಲಿ ಭಾಗವಹಿಸಿದ್ದರು.

ಪೊಳಲಿ ದೇವಳದ ಅರ್ಚಕ ಪರಮೇಶ್ವರ ಭಟ್ ಪ್ರಸಾದ ನೀಡಿದರು ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರ ಯು.ತಾರಾನಾಥ ಆಳ್ವ ತಾ.ಪಂ. ಸದಸ್ಯ ಯಶವಂತ ಪೊಳಲಿ ಇದ್ದರು.

