ಬಂಟ್ವಾಳ : ವಕೀಲರ ಸಂಘ ಇದರ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ-2020 ಪಾಣೆಮಂಗಳೂರು ಶ್ರೀ ಶಾರದಾ ಹೈಸ್ಕೂಲ್ ಮೈದಾನದಲ್ಲಿ ಜರಗಿತು. ಕ್ರೀಡಾಕೂಟವನ್ನು ಹಿರಿಯ ವಕೀಲರಾದ ಅಜಿತ್ ಕುಮಾರ್ ರಾವ್ ಉದ್ಘಾಟಿಸಿದರು. ಅವರು ಕ್ರೀಡೆ ಮನಸ್ಸು ಮನಸ್ಸುಗಳನ್ನು ಒಗ್ಗೂಡಿಸಲು ಸಹಕಾರಿ ಎಂದು ನುಡಿದರು.

DSC_6378ಶಾಂತಿ ದ್ಯೋತಕವಾಗಿ ಪಾರಿವಾಳವನ್ನು ಹಾರಿಸಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ವಿಶೇಷವಾಗಿ ನೆಟ್ಲ ಕನ್ನಡ ಶಾಲೆ ಉಳಿಸಿ ಅಭಿಯಾನದ ಸಂಘಟಕರು ಹಾಜರಿದ್ದು ಕನ್ನಡ ಶಾಲೆ ಉಳಿಸಲು ಸಹಕಾರ ನೀಡುವಂತೆ ವಕೀಲರ ಸಂಘವನ್ನು ಕೋರಿದರು. ಅಭಿಯಾನಕ್ಕೆ ವಕೀಲರು ಸಹಕಾರ ನೀಡುವುದಾಗಿ ಘೋಷಿಸಿದರು.

DSC_6357ವಕೀಲರ ಸಮಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷರುಗ ಳಾದ ಆಶ್ವನಿ ಕುಮಾರ್ ರೈ , ಉಮೇಶ್ ಕುಮಾರ್ ವೈ, ಸುರೇಶ್ ಪೂಜಾರಿ, ಬಿ.ವೆಂಕಡ್ರಮಣ ಶಣೈ, ಪದಾಧಿಕಾರಿಗಳಾದ ಉಪಾಧ್ಯಕ್ಷ ಚಂದ್ರಶೇಖರ ರಾವ್ ಪುಂಚಮೆ, ಜತೆ ಕಾರ್ಯದರ್ಶಿ ವಿನೋದ ಉಪಸ್ಥಿತರಿದ್ದರು. ಕ್ರೀಡಾ ಕಾರ್ಯದರ್ಶಿ ರಾಜೇಶ್ ಬೊಳ್ಳುಕಲ್ಲು ಸ್ವಾಗತಿಸಿದರು. ಶೈಲಜಾ ರಾಜೇಶ್ ವಂದಿಸಿದರು. ನರೇಂದ್ರನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *