ರಾಷ್ಟ್ರೀಯ  ಸೇವಾ ಯೋಜನೆ  ಯು ಪಠ್ಯ ದ ಒಂದು ಭಾಗ ವಾಗಿದೆ  .  ಸಹ ಜೀವನ ವು ಇಂದಿನ  ಆಧುನಿಕತೆ ಜೀವನ ಶೈಲಿ ಯಿಂದಾಗಿ ವಿರಳ ವಾಗುತ್ತಿದೆ .    ಸಹ ಜೀವನ ಒಂದು ವಿಶಿಷ್ಟ ಅನುಭವ ಅದನ್ನು ನಿಮ್ಮಲಿ ಮೈಗೂಡಿಸಿಕೊಳ್ಳಿ , ನಿಮ್ಮಲ್ಲಿರುವ ನಾಯಕತ್ವ ಹೊರಹೊಮ್ಮಲಿ  ಎಂದು ಕೆನರಾ  ಕಾಲೇಜು  ಮಂಗಳೂರು  ಇಲ್ಲಿನ ಪ್ರಾಂಶುಪಾಲರಾದ  ಡಾ ಮಾಲಿನಿ ರವರು  ದ . ಕ . ಜಿ ಪಂ  ಹಿರಿಯ ಪ್ರಾಥಮಿಕ ಶಾಲೆ ಕೊಡ್ಮಾಣ್ ಇಲ್ಲಿ ನಡೆಯುವ   ರಾಷ್ಟ್ರೀಯ  ಸೇವಾ ಯೋಜನೆ   ಕೆನರಾ ಕಾಲೇಜು ಮಂಗಳೂರು ಇದರ ವಾರ್ಷಿಕ ವಿಶೇಷ ಶಿಬಿರ ವನ್ನು  ಧ್ವಜಾ ರೋಹಣ ಗೊಳಿಸಿ  ಮಾತನಾಡಿದರು.
nss kodman
       ವಾರ್ಷಿಕ ವಿಶೇಷ ಶಿಬಿರ  ವನ್ನು ಉದ್ಘಾಟಿಸಿ ಮಾತನಾಡಿದ  ಕೆನರಾ ಪ್ರಾಥಮಿಕ ಶಾಲೆ ಮತ್ತು ಬಾಲವಾಡಿ ಮಂಗಳೂರು ಇದರ ಸಂಚಾಲಕರಾದ ಬಸ್ತಿ ಪುರುಷೋತ್ತಮ ಶೆಣೈ ರವರು ಈ ರೀತಿಯ ಶಿಬಿರಗಳು ತಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ಸೇವಾ ಮನೋಭಾವನೆಗಳು ಜಾಗ್ರತ ಗೊಳ್ಳುತ್ತವೆ ಎಂದರು
   ಸಭೆ ಯ ಅಧ್ಯಕ್ಷತೆಯನ್ನು ವಹಿಸಿದ ಕೆನರಾ ಹೈ ಸ್ಕೂಲ್ ಅಸೋಸಿಯೇಷನ್  ಮಂಗಳೂರು  ನ ಪರ್ಯಾಯ ಕೋಶಾಧಿಕಾರಿ  ಎಂ ವಾಮನ್ ಕಾಮತ ರವರು ತಮ್ಮ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟರು ಈ ಸಂದರ್ಭ ದಲ್ಲಿ ಮುಖ್ಯ ಅತಿಥಿಗಳಾಗಿ ಫರಂಗಿಪೇಟೆ ವ್ಯವಸಾಯ ಸೇವಾ ಬ್ಯಾಂಕ್ ನ ಅಧ್ಯಕ್ಷರಾದ ಕೊಡಮಣ್ಣು ಕಾಂತಪ್ಪ ಶೆಟ್ಟಿ , ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ ತುಂಬೆ ,  ಮೇರಮಜಲು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸತೀಶ್ ನಾಯ್ಗ , ಉಪಾಧ್ಯಕ್ಷರಾದ ಜಯಶ್ರೀ ಕರ್ಕೇರ , ಪಂಚಾಯತ್ ಸದಸ್ಯ ರಾದ ದಯಾನಂದ ಕಾಪಿಕಾಡ್ , ಲಕ್ಷ್ಮಿಕಾಂತ್ ನಾಯಕ್ , ಸರಕಾರಿ ಪ್ರೌಢ ಶಾಲೆ ಕೊಡ್ಮಾಣ್ ನ ಮುಖ್ಯೋಪಾಧ್ಯಾಯರಾದ ರಾಮಚಂದ್ರ ರಾವ್ ,  ದ . ಕ . ಜಿ ಪಂ  ಹಿರಿಯ ಪ್ರಾಥಮಿಕ ಶಾಲೆ ಕೊಡ್ಮಾಣ್  ಮುಖ್ಯ ಶಿಕ್ಷಕರಾದ ಭವಾನಿ ಶಂಕರ , ಸಹ ಶಿಬಿರಾಧಿಕಾರಿಗಳಾದ ವಿಂದ್ಯಾ ಬಿ ಬಿ , ಅವಿನಾಶ್   ಮತ್ತಿತರರು ಉಪಸ್ಥಿತರಿದ್ದರು
 ಶಿಬಿರಾಧಿಕಾರಿಗಳಾದ ದೇಜಮ್ಮ ರವರು ಸ್ವಾಗತಿಸಿದರು , ಸೀಮಾ ಪ್ರಭು ರವರು ವಂದಿಸಿದರು  ರಾಷ್ಟ್ರೀಯ  ಸೇವಾ ಯೋಜನೆ  ನಾಯಕಿ ಪ್ರೇಮ ಅಚಲ್ಕರ್ ರವರು ಕಾರ್ಯಕ್ರಮ ನಿರೂಪಿಸಿದರು

By Suddi9

Leave a Reply

Your email address will not be published. Required fields are marked *