ವಾಮಂಜೂರು : ಗೆದ್ದ ಬಳಿಕ ಜವಾಬ್ದಾರಿ ಜಾಸ್ತಿಯಾಗುತ್ತದೆ. ಜನ ಅಪೇಕ್ಷೆಗಳೂ ಹೆಚ್ಚುತ್ತದೆ. ಆದ್ದರಿಂದ ಜವಾಬ್ದಾರಿಯನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡೋಣ. ಅಭಿವೃದ್ಧಿ ವಿಷಯ ಬಂದಾಗ ಜಾತಿ-ಮತ ಬೇಧ ಮರೆತು ಕರ್ತವ್ಯ ನಿರ್ವಹಿಸೋಣ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅಭಿಪ್ರಾಯಪಟ್ಟರು.gur-nov-17-hemalatha-3

ಮಂಗಳೂರು ನಗರ ಪಾಲಿಕೆಯ 20ನೇ ತಿರುವೈಲು ವಾರ್ಡಿನ ಬಿಜೆಪಿ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಪಕ್ಷ ಕಾರ್ಯಕರ್ತರು, ಮತದಾರ ಬಾಂಧವರಿಗೆ ವಾಮಂಜೂರು ಚರ್ಚ್ ಸಭಾಗೃಹದಲ್ಲಿ ನ. 17ರಂದು ಆಯೋಜಿಸಲಾದ ಅಭಿನಂದನಾ ಸಭೆಯಲ್ಲಿ ಶಾಸಕ ಶೆಟ್ಟಿ ಮಾತನಾಡಿದರು.

ಮತ ನೀಡಿ ಗೆಲ್ಲಿಸಿದ ನನ್ನ ಅಭಿಮಾನಿ ದೇವರಿಗೆ ಅಭಿನಂದನೆಗಳು. ಪ್ರತಿಯೊಬ್ಬರಿಗೂ ಅಭಾರಿಯಾಗಿದ್ದೇನೆ. ನಿಮ್ಮ ಮನೆ ಮಗಳು, ಅಕ್ಕ-ತಂಗಿಯಂತೆ ಕಂಡು, ಎರಡನೇ ಬಾರಿ ಮನಪಾ ಪ್ರವೇಶಿಸುವಂತೆ ಮಾಡಿದ್ದೀರಿ ಎಂದು ತಿರುವೈಲು ವಾರ್ಡಿನ ಬಿಜೆಪಿ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್ ಹೇಳಿದರು.

ರಾಜೀವ ಶೆಟ್ಟಿ ಸಲ್ಲಾಜೆ ಸ್ವಾಗತಿಸಿದರು. ಗೋಕುಲದಾಸ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಬಿಜೆಪಿ ವಾರ್ಡ್ ಪ್ರಧಾನ ಕಾರ್ಯದರ್ಶಿ ಮಹೇಂದ್ರ, ಜಿಲ್ಲಾ ಮಾಧ್ಯಮ ಪ್ರಮುಖ ರಾಜೇಶ್ ಕೊಟ್ಟಾರಿ, ಸ್ಥಳೀಯ ಮುಖಂಡರಾದ ಸನತ್ ಕುಮಾರ್ ರೈ, ಉದ್ಯಮಿ ಓಂ ಪ್ರಕಾಶ್ ಶೆಟ್ಟಿ, ರಘು ಸಾಲ್ಯಾನ್, ಅನಿಲ್ ಕುಮಾರ್ ರೈ ಇದ್ದರು. ಸುರೇಶ್ ಮಾಸ್ಟರ್ ವಂದಿಸಿದರು.

ಈ ಸಂದರ್ಭದಲ್ಲಿ ಆರ್ವಿನ್ ಡಿ’ಸೋಜ, ಕಿಶೋರ್ ವಾಸ್, ಶರೀಫ್, ರಶೀದ್, ಶಾಬಿರ್, ಮೊಹಮ್ಮದ್ ಇಕ್ಬಾಲ್, ಅಹ್ಮದ್ ಬಾವ ಮತ್ತಿತರರನ್ನು ಅಭಿನಂದಿಸಲಾಯಿತು. ಬಳಿಕ ನೂರಾರು ಮಂದಿಗೆ ಪ್ರೀತಿ ಭೋಜನ ಏರ್ಪಡಿಸಲಾಗಿತ್ತು.

By Suddi9

Leave a Reply

Your email address will not be published. Required fields are marked *