ಬಂಟ್ವಾಳ: ತಾಲೂಕು ಬಿಎಂಎಸ್ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಆಶ್ರಯದಲ್ಲಿ ಬಿ.ಸಿ.ರೋಡಿನಿಂದ ಕಟೀಲಿಗೆ ಪ್ರಥಮ ವರ್ಷದ ಪಾದಯಾತ್ರೆಗೆ ಬಿ.ಸಿ.ರೋಡಿನ ರಕ್ತೇಶ್ವರೀ ದೇವಸ್ಥಾನದ ಬಳಿ ಚಾಲನೆ ನೀಡಲಾಯಿತು. 15 ಮಂದಿ ರಿಕ್ಷಾ ಚಾಲಕರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದು ಸಂಘದ ಅಧ್ಯಕ್ಷ ವಸಂತ ವಿ. ಮಣಿಹಳ್ಳ ಬಿ.ಸಿ.ರೋಡಿನಲ್ಲಿ ಶುಭಹಾರೈಸಿ ಬೀಳ್ಕೊಟ್ಟರು.

